ಮಾ ತುಜೆ ಸಲಾಮ್~ಯೋಗ ಕ್ಷೇಮ ಉಡುಪಿ ಪ್ರಸ್ತುತ

!!ಜನನಿ ಜನ್ಮ-ಭೂಮಿ-ಸ್ಚ ಸ್ವರ್ಗಾದಪಿ ಗರೀಯಸಿ ||
ಮೇಲಿನ ಶ್ಲೋಕ ಎಂದರೆ ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ದೊಡ್ಡದು !!

ಆಗಸ್ಟ್ 15 ಭಾರತವು ಸ್ವತಂತ್ರವಾಗಿ ಉಸಿರಾಡಿದ ದಿನವಾಗಿದೆ! ಅಂತೆಯೇ, ಯೋಗ, ನಿಮ್ಮ ಉಸಿರಾಟವನ್ನು ಸ್ವಾಧೀನಪಡಿಸಿ ಕೊಳ್ಳುವ ಒಂದು ಮಾರ್ಗವಾಗಿದೆ, ಸ್ವಯಂ ಮೂಲಕ, ಸ್ವಯಂ. . ನಮ್ಮಿಂದಲೇ !! ಇದು ಬೇರೇನೂ ಅಲ್ಲ, ಉಸಿರಾಡುವ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದಿಂದ ಉಸಿರಾಡುವುದು…!ಜಗತ್ತಿಗೆ ಪ್ರಾಚೀನ ಭಾರತದ ಯೋಗದ ಕೊಡುಗೆ ಈಗ ಬೆಳಕಿಗೆ ಬರುತ್ತಿದೆ. ಯೋಗದ ಅಭ್ಯಾಸ ಗಳು ನಮ್ಮ ಆರೋಗ್ಯ ಮತ್ತು ಸಂತೋಷವನ್ನು ಹೆಚ್ಚಿಸುತ್ತವೆ. ಕೇವಲ ವಯಸ್ಕರಿಗಷ್ಟೇ ಅಲ್ಲ, ನಮ್ಮ ಮುಂದಿನ ಪೀಳಿಗೆಯಲ್ಲೂ ಬೇರೂರುವಂತೆ ಈ ಅಮೂಲ್ಯ ರತ್ನವನ್ನು ರವಾನಿಸುವುದು ಮುಖ್ಯವಾಗಿದೆ. ಯೋಗಕ್ಷೇಮವು ಮಕ್ಕಳಲ್ಲಿಯೂ ಯೋಗಭ್ಯಾಸದ ಉಪಯುಕ್ತತೆಯನ್ನು ಮನವರಿಕೆ ಮಾಡಿಕೊಡುತ್ತಿದೆ..

ಅಮಿತ ಭಟ್ ನೇತೃತ್ವದಲ್ಲಿ 75 ನೇ ಸ್ವಾಂತಂತ್ರ್ಯದ ಸಲುವಾಗಿ ಯೋಗಕ್ಷೇಮದಲ್ಲಿ ನಾವು ಮಹಿಳೆಯರು ಮತ್ತು ಯುವಕರು ವಿನಮ್ರವಾಗಿ ಭರತ ಖಂಡದ ಸೌಂದರ್ಯ ಮತ್ತು ಔದಾರ್ಯದ ಒಳಗೆ ಯೋಗದ ಉಪಸ್ಥಿತಿ ಮತ್ತು ಸತ್ವದ ಕಡೆಗೆ ನಮ್ಮಲ್ಲಿರುವ ಬೇಷರತ್ತಾದ ಪ್ರೀತಿ ಮತ್ತು ಗೌರವವನ್ನು ಚಿತ್ರಿಸಲು ಪ್ರಯತ್ನಿಸಿದ್ದೇವೆ.

ನಾವು ಈ ವೀಡಿಯೊವನ್ನು ಕೃತಜ್ಞತೆಯ ಹಾಗೂ ಗೌರವದ ಪ್ರತೀಕವಾಗಿ ಅರ್ಪಿಸುತ್ತೇವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತ್ಯಾಗ ಮಾಡಿದ್ದಲ್ಲದೆ ದೇಶಕ್ಕಾಗಿ ಬಲಿದಾನ ಕೊಟ್ಟರು, ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ತೀವ್ರ ಹೋರಾಟಗಳ ಮೂಲಕ ಶ್ರಮಿಸಿದರು. ದೇಹ, ಶಾಂತ ಮನಸ್ಸು ಮತ್ತು ಆತ್ಮದ ಸಮತೋಲನೆಯೊಂದಿಗೆ ಹಾಗೂ ದೇಶಭಕ್ತಿಯ ಬಲವಾದ ಭಾವನೆಗಳೊಂದಿಗೆ ಭಾರತಾಂಬೆಗೆ ಯೋಗಕ್ಷೇಮ ತಂಡವು ನಮಸ್ಕರಿಸುತ್ತದೆ.

 

 
 
 
 
 
 
 
 
 
 
 

Leave a Reply