ಗ್ಯಾರೇಜ್ ಕಾರ್ಮಿಕರಿಗೆ ಲಸಿಕೆಗಾಗಿ ಅಪರ ಜಿಲ್ಲಾಧಿಕಾರಿಗೆ ಮನವಿ

ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಜಿಲ್ಲೆಯ ಸುಮಾರು ಮೂರು ಸಾವಿರ ಗ್ಯಾರೇಜ್ ಮಾಲಕರು ಮತ್ತು ಕಾರ್ಮಿಕ ವರ್ಗಕ್ಕೆ ಲಸಿಕೆ ನೀಡಲು ಶಿಬಿರಗಳನ್ನು ಆಯೋಜಿಸುವಂತೆ ಅಪರ ಜಿಲ್ಲಾಧಿಕಾರಿ ಬಿ ಸದಾಶಿವ ಪ್ರಭು ರವರಿಗೆ ಗ್ಯಾರೇಜ್ ಮಾಲಕರ ಸಂಘ ಸೋಮವಾರ ಮನವಿ ಸಲ್ಲಿಸಿದೆ.

ಈ ಸಂದರ್ಭದಲ್ಲಿ ಸೋಮವಾರದಿಂದ ರಾಜ್ಯದೆಲ್ಲೆಡೆ ಕೋವಿಡ್ ಪಾಸಿಟಿವಿಟಿ ಪ್ರಮಾಣ ಇಳಿಕೆಯಿದ್ದೆಡೆ ಉಡುಪಿ ಜಿಲ್ಲೆಯನ್ನು ಸೇರಿಸಿ ಲಾಕ್ಡೌನ್ ನಿಯಮಗಳನ್ನು ಸಡಿಲು ಗೊಳಿಸಲಾಗಿದೆ. ಆದರೆ ಅಟೋಮೊಬೈಲ್ ಕ್ಷೇತ್ರಕ್ಕೆ ಸರಕಾರದ ಲಾಕ್ ಡೌನ್ ನಿಯಮಗಳಲ್ಲಿ ವ್ಯವಹಾರ ಮಾಡಲು ಇನ್ನೂ ನಿರ್ಬಂಧವಿದೆ.

ಈಗಾಗಲೇ ಒಂದೂವರೆ ವರ್ಷಗಳಿಂದ ಕರೋನಾ ಅಲೆಯಿಂದ ಇವರೆಲ್ಲರ ಬದುಕು ದೇಶದ ಆರ್ಥಿಕ ಪರಿಸ್ಥಿತಿಯಿಂದ ಅತಂತ್ರ ಸ್ಥಿತಿಯಲ್ಲಿದೆ. ಸರಕಾರ ನೀಡಿದ ಕೋವಿಡ್ ಪರಿಹಾರ ನಿಧಿ ಈ ವರ್ಗದಲ್ಲಿ ಕೇವಲ 5 ಪ್ರತಿಶತ ಜನರಿಗೆ ಮಾತ್ರ ತಲುಪುತ್ತದೆ.

ಹಾಗೆಯೆ ಗ್ಯಾರೇಜ್ ವ್ಯವಹಾರದ ವಾತಾವರಣದಲ್ಲಿ ಕರೋನಾ ಹರಡುವ ಯಾವ ಸಂಭವ ನೀಯತೆಯೂ ಇಲ್ಲ. ಹೆಚ್ಚಿನ ಗ್ಯಾರೇಜುಗಳಲ್ಲಿ ಮೂರು ಅಥವಾ ನಾಲ್ಕು ಕಾರ್ಮಿಕರು ದುಡಿಯುತ್ತಿದ್ದು ಇಲ್ಲಿ ಸಾಮಾಜಿಕ ಅಂತರ ಪ್ರತೀ ಕ್ಷಣವೂ ಕಾಯ್ದಿರಿಸಲಾಗುತ್ತದೆ.

ಆದುದರಿಂದ ಲಾಕ್ ಡೌನ್ ಸಡಿಲಿಕೆ ನಿಯಮಗಳನ್ನು ಗ್ಯಾರೇಜ್, ಬಿಡಿಭಾಗಗಳ ಅಂಗಡಿಗಳು ಸೇರಿದಂತೆ ಜಿಲ್ಲೆಯಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ದುಡಿಯುವ ಎಲ್ಲ ಕಾರ್ಮಿಕರಿಗೂ ಅನ್ವಯಿಸುವಂತೆ ಕ್ರಮ ಕೈಗೊಳ್ಳಬೇಕಾಗಿ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು, ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ಕೊಸ್ಶಾದಿಕಾರಿ ಸಂತೋಷ್, ಮಂಗಳೂರು ಗ್ಯಾರೇಜ್ ಮಾಲಕರ ಸಂಘದ ಮಾಜಿ ಉಪಾಧ್ಯಕ್ಷ ಉದಯಕಿರಣ್ ಹಾಜರಿದ್ದರು.

 
 
 
 
 
 
 
 
 
 
 

Leave a Reply