ಕಟೀಲು ಯಕ್ಷಗಾನ ಮೇಳಗಳ ಪ್ರದರ್ಶನಗಳ ಅವಧಿಯಲ್ಲಿ ಬದಲಾವಣೆ

ಮಂಗಳೂರು : ಕರ್ನಾಟಕ ಸರ್ಕಾರ ಕೋವಿಡ್/ಒಮಿಕ್ರಾನ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಆದೇಶದ ಪ್ರಕಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ಪ್ರದರ್ಶನಗಳು 28.12.2021 ರಿಂದ 07.01.2022ರ ತನಕ ಕಾಲಮಿತಿಗೆ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರ ವರೆಗೆ ಅನುಗುಣವಾಗಿ ನಡೆಯಲಿರುವುದು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಭಕ್ತಾಭಿಮಾನಿಗಳು ಹಾಗು ಶ್ರೀ ಕಟೀಲು ಮೇಳಗಳ ಎಲ್ಲಾ ಸೇವಾದಾರರು ಸಹಕರಿಸಬೇಕಾಗಿ ಶ್ರೀ ಕ್ಷೇತ್ರ ಕಟೀಲಿನ ಆಡಳಿತ ಮಂಡಳಿ ಹಾಗು ಶ್ರೀ ಕಟೀಲು ಮೇಳಗಳು ಸಂಚಾಲಕರು ವಿನಂತಿಸಿಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply