ಕುಂದಗನ್ನಡಕ್ಕೆ ಹೊಸ ಆಯಾಮ ನೀಡಿದ ನರೇಂದ್ರ ಕುಮಾರ್ ಕೋಟ

ಕೋಟ: ನರೇಂದ್ರ ಕುಮಾರ್ ಕೋಟ ಅವರು ನಿಜವಾದ ಅರ್ಥದಲ್ಲಿ ಕುಂದಗನ್ನಡದ ಪರಿವಾಜ್ರಕರು .ಅವರಿಗೆ ನಿತ್ಯವೂ ಕುಂದಾಪ್ರ ಕನ್ನಡದ ಉತ್ಸವ. ಸುಮಾರು ವರ್ಷಗಳಿಂದಲೆ ಹಂಚಿ ಕುಂದಾಪ್ರ ಭಾಷೆಗೊಂದು ವೇದಿಕೆ. ಮೌಲ್ಯ ಕೊಡಲು ಪ್ರಯತ್ನಿಸಿದವರು ಎಂದರೆ ತಪ್ಪಾಗಲಾರದು.

ಹಲವಾರು ಹೊಸತನಗಳ ಮೂಲಕ ಕುಂದಾಪ್ರ ಕನ್ನಡದ ಪ್ರಸರಣಕ್ಕೆ ದಾರಿ ದೀವಿಗೆ ಯಾದವರು. ಸುಮಾರು 30 ವರ್ಷಗಳ ಹಿಂದೆಯೇ ವಾಹಿನಿ ಯುವಕ ಮಂಡಲದ ಮೂಲಕ ಕುಂದಾಪ್ರ ಕನ್ನಡದಲ್ಲಿ ನಗೆಯು ಬರುತಿದೆ ಎಂಬ ನಾಟಕ ಪ್ರಯೋಗಿಸಿ ಕುಂದಾಪ್ರ ಕನ್ನಡದ ಚೈತನ್ಯದ ಚಿಲುಮೆ ಯಾದವರು.

 ಸಾಕ್ಷರತಾ ಆಂದೋಲನದ ಸಮಯದಲ್ಲಿ ಬೀದಿ ನಾಟಕ ಪ್ರದರ್ಶನದ ಮೂಲಕ ನಮ್ಮ ಭಾಷೆಯ ಪ್ರಯೋಗ ಮಾಡಿ ಸೈ ಎನಿಸಿಕೊಂಡವರು.ಜನಕ್ಕೆ ಅದು ಮೆಚ್ಚುಗೆ ಆದರೂ ಹಲವು ಟೀಕೆಗಳು ಬಂದರೂ ಅದಕ್ಕೆ ಹೆದರದೆ ನಾವೀನ್ಯತೆ ಪ್ರಯೋಗ ಮಾಡಿ ಮನಗೆದ್ದವರು.

 ಕುಂದಾಪ್ರ ಕನ್ನಡಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ ಕೆಲವೊಂದನ್ನು ಪಟ್ಟಿ ಮಾಡಬಹುದು.

 ಕುಂದಾಪ್ರ ಕನ್ನಡದ ಗಾದೆ ಸಂಗ್ರಹ ( ಹೊಸ ಹೂಗು ಕೋಲೇ)

 ೧೯೦೯-೧೦ ರಂದು ವಿವೇಕ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಮೊತ್ತ ಮೊದಲ ಬಾರಿಗೆ ಕುಂದಾಪ್ರ ಕನ್ನಡ ಸಾಹಿತ್ಯ ಸಮ್ಮೇಳನ ಕಾಂಬ ಆಯೋಜನೆ ಮಾಡಿ ಇಡೀ ಕುಂದಾಪ್ರ ಭಾಷೆಯಲ್ಲಿಯೇ ಇರುವುದು ಅವಿಸ್ಮರಣೀಯ. ನಿರೂಪಣೆಯಿಂದ ಹಿಡಿದು ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ಭಾಷೆಯಲ್ಲಿಯೇ ಪ್ರಸ್ತುತಿಗೊಂಡಿರುವುದು ಶ್ಲಾಘನೀಯ.

 ಸಮ್ಮೇಳನಕ್ಕೆ ಪೂರಕವಾಗಿ ಕಾಂಬ ಸ್ಮರಣ ಸಂಚಿಕೆ ಪ್ರಕಟಿಸಿ ಅದರಲ್ಲಿ ಕುಂದಾಪ್ರದ ಸೊಗಡನ್ನು ಪರಿಚಯಿಸಿದು ಮರೆಯಲಾಗದ ನೆನಪು.

 ಬಸ್ರೂರಿನಲ್ಲಿ ನಡೆದ ಕುಂದಾಪ್ರ ಕನ್ನಡದ ೩ನೇ ಸಮ್ಮೇಳನ ಹೊಯ್ಕ್ ಇವರಿಗೆ ಪ್ರೇರಣೆಯಾಗಿ ನಿಂತದು ವಿಚಾರ ಕುಂದಾಪ್ರ ಭಾಷಾ ವೃತ್ತಾಂತ ಸಿಬ್ಲ್ ಸರಣಿ ಸಿಂಚನ ಉಡುಪಿ ಚಾನೆಲ್‌ನಲ್ಲಿ ಆರಂಭಿಸಿ ಅದರ ಮೂಲಕ ಕುಂದಾಪ್ರ ಕನ್ನಡ ದ ಸಂಪ್ರದಾಯ , ನಂಬಿಕೆಯ ಪರಿಚಯವನ್ನು ಜನತೆಗೆ ಮಾಡಿರುವುದು ಹೆಮ್ಮೆಯ ಸಂಗತಿ ಸಾಮಾಜಿಕ ಜಾಲ ತಾಣಗಳಲ್ಲಿ ಬೆಂಡ್ರೊಟಿ ಎಂಬ ಕುಂದಾಪ್ರ ಗಾದೆಗಳ ದ್ವನಿ ಸಾಂದ್ರಿಕೆ ಪ್ರಕಟಿಸಿರುವುದು ವಿಶೇಷ ವಾಗಿ ಗಮನಿಸಬಹುದು.

 ಕುಂದಾಪ್ರ ಕನ್ನಡದಲ್ಲಿಯೇ ಸುಗಂಧಿ ಚಲನಚಿತ್ರ ಮಾಡಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಕುಂದಾಪ್ರ ಕನ್ನಡಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುವಂತೆ ಮಾಡಿದವರು.

ನಂದುರಾಯನ ದರ್ಬಾರ್ ಎನ್ನುವ ಕುಂದಾಪ್ರ ಕನ್ನಡ ತಾಳಮದ್ದಳೆಯನ್ನು ಸಂಘಟಿಸಿ ಪಿ. ವಿ ಆನಂದರವರ ಪದ್ಯ ರಚನೆ ಮತ್ತು ನವೀನ್ ರವರ ಗಾಯನದಲ್ಲಿ, ಅರ್ಥದಾರಿಗಳಾಗಿ ರಾಮಚಂದ್ರ ಐತಾಳ್. ಸತೀಶ್ ವಡ್ಡರ್ಸೆ , ಪ್ರಸಾದ ಬಿಲ್ಲವ. ಮತ್ತು ನರೇಂದ್ರ ಕುಮಾರ್ ಕೋಟ ಇವರ ಸಹಕಾರದೊಂದಿಗೆ ಈ ಒಂದು ಹೊಸ ಪ್ರಯೋಗ ದ ಸಾಧ್ಯತೆಯನ್ನು ತೆರೆದಿಟ್ಟವರು..

 ಕುಂದಾಪ್ರ ಕನ್ನಡದಲ್ಲಿ ಗಮ್ಜಲ್ ಎಂಬ ಹರಟೆಯ ತಂಡವನ್ನು ಆರಂಭಿಸಿ ವಿವಿಧ ಸಮ್ಮೇಳನಗಳಲ್ಲಿ ಕುಂದಾಪ್ರ ಕನ್ನಡದ ಹರಟೆಯ ಅನಾವರಣ ಮಾಡಿ ಚಾಕಚಕ್ಯತೆ ಮೂಡಿಸಿದವರು.

 ಅವಕಾಶ ವಿದ್ದಾಗಲೆಲ್ಲಾ ವಿವಿಧ ಮಾಧ್ಯಮಗಳಲ್ಲಿ ,ವಿವಿಧ ಆಯಾಮಗಳಲ್ಲಿ ಕುಂದಾಪ್ರ ಕನ್ನಡಕ್ಕೆ ಆಧ್ಯತೆ ನೀಡಿದವರು.

ಮಾತ್ರವಲ್ಲದೆ ಹಲವಾರು ಕೃತಿಗಳ ಪರಿಚಯದೊಂದಿಗೆ. ಕುಂದಗನ್ನಡದ ಕಿರಿಯ ಪ್ರತಿಭೆಗಳನ್ನು ಹೊರ ಪ್ರಪಂಚಕ್ಕೆ ಪರಿಚಯಿಸಿದ ಕೀರ್ತಿ ಇವರದು. 

ಇಂತಹ ಒಂದು ಕುಂದಗನ್ನಡದ ಹೆಮ್ಮೆಯ ಪುತ್ರನಿಗೆ ರಾಷ್ಟ್ರ ರಾಜ್ಯ ಮಟ್ಟದಲ್ಲಿ ಗೌರವ . ಮನ್ನಣೆ ಸಿಗಬೇಕೆಂಬುದೆ ನಮ್ಮ ಆಶಯ.

ಕುಮಾರ್ ಪಾರಂಪಳ್ಳಿ

 
 
 
 
 
 
 
 
 
 
 

Leave a Reply