ಕಂಪಾನಿಯೋ ಫಿಸಿಯೋ ತೆರಫಿ ಆರೋಗ್ಯ ಶಿಬಿರ

ದೊಂಡೆರಂಗಡಿಯ ಶ್ರೀ ರಾಮ ಮಂದಿರದಲ್ಲಿ ಕಂಪಾನಿಯೋ ಫಿಸಿಯೋ ತೆರಫಿ ಆರೋಗ್ಯ ಶಿಬಿರ ಒಂದು ತಿಂಗಳಿಂದ ನಿರಂತರ ನಡೆದು ದೊಂಡೆರಂಗಡಿ ಆಸು ಪಾಸಿನ ಸುಮಾರು 250ಕ್ಕೂ ಹೆಚ್ಚಿನ ಶಿಬಿರಾರ್ಥಿ ಗಳು ಈ ಶಿಭಿರದ ಸದುಪಯೋಗ ಪಡೆದು ಕೊಂಡರು. ಇಂದಿನ ಸಮಾರೋಪ ಸಮಾರಂಭದಲ್ಲಿ ಮುನಿಯಾಲ್ ಲಯನ್ಸ್ ಕ್ಲಬ್ಬಿನ ವತಿಯಿಂದ ಕಂಪಾನಿಯೋ ಫಿಸಿಯೋ ತೆರಫಿಯ ಅಧಿಕಾರಿ ನವೀನ್ ಶೆಟ್ಟಿ ಹಾಗೂ ಸಹಾಯ ಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಈ ಸಭೆಯಲ್ಲಿ ಲಯನ್ಸ್ ಕ್ಲಬ್ಬಿನ ಅಧ್ಯಕ್ಷರು, ಲಯನ್. ಸೀತಾರಾಮ ಕಡಂಬ mjf, ನಿವೃತ್ತ ಶಿಕ್ಷಕರಾದ. ಡಿ. ಲಕ್ಷ್ಮಣ್ ಮಾಸ್ಟರ್ ಕುಕ್ಕುಜೆ, ಪಂಚಮಿ ಚಾರಿಟೇಬಲ್ ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ಹರೀಶ್. ಬಿ. ಪಂಚಮಿ, ಶ್ರೀ ರಾಮ ಮಂದಿರದ ಆಡಳಿತ ಸಮಿತಿಯ ರಾಘವೇಂದ್ರ ನಾಯಕ್, ಕಾರ್ಕಳ ಭೂ ಅಭಿವೃದ್ಧಿ ಬ್ಯಾಂಕ್ ನ ಉಪಾಧ್ಯಕ್ಷರಾದ ಭೋಜ ಪೂಜಾರಿ, ಹಾಗೂ ಹಿರಿಯರಾದ ನರಸಿಂಹ ಆಚಾರ್ಯ, ಲಯನ್ ಸಂಪತ್ ಪೂಜಾರಿ ಕುಕ್ಕುಜೆ, ಪ್ರಸನ್ನ ದೇವಾಡಿಗ ಹಾಗೂ ಊರಿನ ಹಿತೈಷಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಲಯನ್. ಅಶೋಕ್ ದೊಂಡೆರಂಗಡಿ ಸ್ವಾಗತಿಸಿ ಲಯನ್ ಅಶೋಕ್. ಎಂ. ಶೆಟ್ಟಿ ಧನ್ಯವಾದವಿತ್ತರು

 
 
 
 
 
 
 
 
 
 
 

Leave a Reply