ಕೋಟತಟ್ಟು -ಎಸೆಸ್‌ಸೆಲ್ಸಿ ಸಾಧಕರಿಗೆ ಸನ್ಮಾನ

ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಒಂದನೇ ವಾರ್ಡ್ನಲ್ಲಿ ಎಸೆಸ್‌ಸೆಲ್ಸಿ ಪರೀಕ್ಷೆಯಲ್ಲಿ ಶೇ. ೮೦ % ಗಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸ್ವಗೃಹಕ್ಕೆ ತೆರಳಿ ಗೌರವಿಸುವ ಕಾರ್ಯಕ್ರಮ ಬುಧವಾರ ನಡೆಯಿತು.

ಕೋಟ ವಿವೇಕ ವಿದ್ಯಾ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಾದ ಉಜ್ವಲ್ ಬಾರಿಕೆರೆ ,ವಿನ್ಯಾಸ ಕಾರಂತ್ ,ಶ್ರೇಯ ಕದ್ರಿಕಟ್ಟು , ವೈಷ್ಣವಿ ಬೆಟ್ಟಿನ ಮನೆ,ದಿಶಾ ಪೂಜಾರಿ,ಮೊಹಮ್ಮದ್ ಸಾಹಿರ್ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಟತಟ್ಟು ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ,ಸದಸ್ಯರಾದ ಸತೀಶ್ ಕುಂದರ್ ಬಾರಿಕೆರೆ, ಸರಸ್ವತಿ , ಜ್ಯೋತಿ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಯರಾಮ್ ಶೆಟ್ಟಿ, ಕಾರ್ಯದರ್ಶಿ ಶೇಖರ್ ಮರವಂತೆ, ಪಂಚಾಯತ ಸಿಬ್ಬಂದಿ ರವಿ, ಹಾಗೂ ಸಿಎ ಬ್ಯಾಂಕ್ ನಿರ್ದೇಶಕ ರಂಜಿತ್ ಕುಮಾರ್ ಬಾರಿಕೆರೆ, ಪತ್ರಕರ್ತ ರವೀಂದ್ರ ಕೋಟ, ರತ್ನಾಕರ್ ಬಾರಿಕೆರೆ, ಸಂತೋಷ್ ಪೂಜಾರಿ ,ಬಾರಿಕೆರೆ ಯುವಕ ಮಂಡಲದ ಅಧ್ಯಕ್ಷ ಅವಿನಾಶ್ ಕೆ.ಎಸ್,ಪೂಜಾ, ಉಮೇಶ್ ಕುಂದರ್,ಮಾಧವ ಮರಕಾಲ ಉಪಸ್ಥಿತರಿದ್ದರು.

ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಒಂದನೇ ವಾರ್ಡ್ನಲ್ಲಿ ಎಸೆಸ್‌ಸೆಲ್ಸಿ ಪರೀಕ್ಷೆಯಲ್ಲಿ ಶೇ. ೮೦ % ಗಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸ್ವಗೃಹಕ್ಕೆ ತೆರಳಿ ಗೌರವಿಸುವ ಕಾರ್ಯಕ್ರಮ ಬುಧವಾರ ನಡೆಯಿತು. ಕೋಟತಟ್ಟು ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಪಾಧ್ಯಕ್ಷ ವಾಸು ಪೂಜಾರಿ,ಸದಸ್ಯರಾದ ಸತೀಶ್ ಕುಂದರ್ ಬಾರಿಕೆರೆ, ಸರಸ್ವತಿ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply