Janardhan Kodavoor/ Team KaravaliXpress
24.6 C
Udupi
Tuesday, July 5, 2022
Sathyanatha Stores Brahmavara

ಕಲಿಯುಗದಲ್ಲಿ ದೇವಳಗಳ ಜೀರ್ಣೂದ್ಧಾರಗಳಿಂದ ಭಗವಂತನ ರುಣ ಸಂದಾಯ ಮಾಡುವ ಸದಾವಕಾಶ- ಅಪ್ಪಣ್ಣ ಹೆಗ್ಡೆ

ಕೋಟ: ಕಲಿಯುವಗದಲ್ಲಿ ದೇವಳಗಳ ಜೀರ್ಣೋದ್ಧಾರ ಕಾರ್ಯಗಳಿಂದ ದೇವರುಣಕ್ಕೆ ಸಕಾಲವಾಗಿದೆ. ಎಂದು ಬಸ್ರೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಳದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಹೇಳಿದ್ದಾರೆ.

ಮಣೂರು ಶ್ರೀ ಮಳಲುತಾಯಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ನೂತನ ದೇಗುಲ ಲೋಕಾರ್ಪಣೆ,ಅಷ್ಟಬಂಧ ಪುನಃ ಪ್ರತಿಷ್ಠೆ ಸಹಸ್ರ ಪರಿಕಲಶಪೂರ್ವಕ,ಬ್ರಹ್ಮಕುಂಭಾಭಿಷೇಕ ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇವಳಗಳ ಸರ್ವತೋಮುಖ ಅಭಿವೃದ್ಧಿಗಳಿಂದ ಗ್ರಾಮಗಳು ಸುಭಿಕ್ಷೆಗೊಳ್ಳುತ್ತದೆ.ಒಂದು ಊರು ಒಗ್ಗೂಡಿಸಿಕೊಂಡು ಕಾರ್ಯಕ್ಕೆ ಇಳಿದಾಗ ಈ ರೀತಿಯ ಯಶಸ್ಸು ಗಳಿಸಲು ಸಾಧ್ಯ ಎಂದು ಈ ಊರು ಸಾಕ್ಷಿಕರಿಸಿದೆ.
ದೇವಳಗಳ ಅಭಿವೃದ್ಧಿಗೆ ಆರ್ಥಿಕ ಮೂಲ ಎಷ್ಟು ಮುಖ್ಯವೊ ಮಾನವ ಸಂಪನ್ಮೂಲವು ಅಷ್ಟೆ ಮುಖ್ಯವಾಗಿದೆ.ಭಗವಂತನ ಮೇಲೆ ನಂಬಿಕೆ ಇಟ್ಟು ಶ್ರದ್ಧಾ ಭಕ್ತಿಪೂರ್ವಕವಾಗಿ ನಮಿಸಿದಾಗ ದೇವ ಒಲುಮೆ ಸಾಧ್ಯ,ದೇವಳಗಳು ಜೀರ್ಣೋದ್ಧಾರಗೊಳಿಸಿ ನಿರಂತರವಾಗಿ ದೇವಳದ ಸಂದರ್ಶನ ಮಾಡಬೇಕು ತಮ್ಮೂಲಕ ಭಕ್ತಿಯ ಪಾರಮ್ಯ ಮೆರೆಯಬೇಕು,ಮಳಲುತಾಯಿ ದೇವಿ ಪುನಃ ಪ್ರತಿಷ್ಠೆ ಸಂದರ್ಭದಲ್ಲಿ ವರುಣದೇವ ಹೂವಿನ ಮಳೆಗೆರೆದಿದ್ದಾನೆ ಇನ್ನೆನು ಸಂತೋಷ ಊರಿಗೆ ಬೇಕಾಗಿದೆ ಎಂದು ಶುಭಹಾರೈಸಿದರು.
ಆನೆಗುಡ್ಡೆ ಶ್ರೀವಿನಾಯಕ ದೇವಳದ ಅನುವಂಶಿಕ ಮುಕ್ತೇಸರ ಸೂರ್ಯನಾರಾಯಣ ಉಪಾಧ್ಯಾಯ ಶುಭಾಶಂಸನೆಗೈದು ಮಾತನಾಡಿ ದೇವಳಗಳು ಜೀರ್ಣೋದ್ಧಾರಗೊಳಿಸುವುದು ಪುಣ್ಯದ ಕಾರ್ಯವಾಗಿದೆ.ಇದು ಪೂರ್ವಜನ್ಮದ ಪುಣ್ಯ ಎಂದರೂ ತಪ್ಪಾಗಲಿಕ್ಕಿಲ್ಲ,ಭಾರತೀಯ ಸಂಸ್ಕçತಿ ದೃಢವಾಗಿ ಬೇರೂರಲು ದೇವಳಗಳು ಮಂಚೂಣಿಗೆ ನಿಲ್ಲುತ್ತದೆ.ಸಂಸ್ಕಾರಭರಿತರಾಗಿ ದೇವಳಗಳ ಸಂದರ್ಶನದಿAದ ನಮ್ಮ ಪಾಪಗಳು ಶಮನಗೊಳ್ಳುತ್ತದೆ.ಪರಿಶ್ರಮದಿಂದ ಗಳಿಸಿದ ಸಂಪಾದನೆಯ ಒಂದು ಭಾಗ ದೇವರ ಕಾರ್ಯಕ್ಕೆ ವಿನಿಯೋಗಿಸಿ ಆಗ ಸಾರ್ಥಕತೆ ಕಾಣಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂಬಳಗದ್ದೆ ಮನೆತನದ ಡಾ.ಜೀತೇಂದ್ರ ಶೆಟ್ಟಿ ವಹಿಸಿದರು.
ಮುಖ್ಯ ಅಭ್ಯಾಗತರಾಗಿ ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ಅಧ್ಯಕ್ಷ ಆನಂದ್ ಸಿ ಕುಂದರ್ ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್,ಮಣೂರು ಶ್ರೀಮಹಾಲಿಂಗೇಶ್ವರ ದೇವಳದ ಅಧ್ಯಕ್ಷ ಸತೀಶ್ ಹೆಚ್ ಕುಂದರ್,ಉದ್ಯಮಿಗಳಾದ ಮಲ್ಯಾಡಿ ಶಿವರಾಮ ಶೆಟ್ಟಿ, ಸಂತೋಷ್ ನಾಯಕ್ ತೆಕ್ಕೆಟ್ಟೆ,ಕೋಟ ಗ್ರಾಮಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ,ಸದಸ್ಯರಾದ ಶಾಂತಾ,ಶಿವರಾಮ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದೇವಳದ ನಿರ್ಮಾಣ ಉಸ್ತುವಾರಿ ಎಂ.ಎಸ್ ಸಂಜೀವ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಶಿಕ್ಷಕ ಅಶೋಕ್ ತೆಕ್ಕಟ್ಟೆ ನಿರೂಪಿದರು.

ಮಳಲುತಾಯಿ ದುರ್ಗಾಪರಮೇಶ್ವರಿ ಭಕ್ತಿಗೀತೆಗಳ ಸಿ.ಡಿ ಬಿಡುಗಡೆ
ಇದೇ ಸಂದರ್ಭದಲ್ಲಿ ಮೊಟ್ಟ ಮೊದಲ ಬಾರಿಗೆ ಮಳಲುತಾಯಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಭಕ್ತಭಾವದ ಗೀತೆಯ ಸಿ ಡಿಯನ್ನು ದೇವಳದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಆರ್ ಶೆಟ್ಟಿ ಬಿಡುಗಡೆಗೊಳಿಸಿದರು.ಗೀತೆ ರಚನೆಗಾರ ಪ್ರೋ.ಪವನ್ ಕಿರಣ್‌ಕೆರೆ,ಸಂಗೀತ ಮತ್ತು ರಾಗಸಂಯೋಜಕ ಭಾಸ್ಕರ್ ರಾವ್ ಬಿ.ಸಿ ರೋಡ್,ಗಾಯಕ ಜಗದೀಶ್ ಪುತ್ತೂರು,ಸಾಹಿತಿ ನರೇಂದ್ರ ಕುಮಾರ್ ಕೋಟ,ಸಚಿವ ಕೋಟ ಆಪ್ತ ಸಹಾಯಕ ಹರೀಶ್ ಕುಮಾರ್ ಶೆಟ್ಟಿ,ಗಾಯಕ ಕೃಷ್ಣ ಸಾಸ್ತಾನ,ಉದ್ಯಮಿ ಎಂ.ಸಿ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

ಮಣೂರು ಶ್ರೀ ಮಳಲುತಾಯಿ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದ ನೂತನ ದೇಗುಲ ಲೋಕಾರ್ಪಣೆ,ಅಷ್ಟಬಂಧ ಪುನಃ ಪ್ರತಿಷ್ಠಿ ಸಹಸ್ರ ಪರಿಕಲಶಪೂರ್ವಕ,ಬ್ರಹ್ಮಕುಂಭಾಭಿಷೇಕ ವಾರ್ಷಿಕ ಜಾತ್ರೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಬಸ್ರೂರು ಶ್ರೀ ಮಹಾತೋಭಾರ ಮಹಾಲಿಂಗೇಶ್ವರ ದೇವಳದ ಧರ್ಮದರ್ಶಿ ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಬಳಗದ್ದೆ ಮನೆತನದ ಡಾ.ಜೀತೇಂದ್ರ ಶೆಟ್ಟಿ, ಕೋಟ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇವಸ್ಥಾನದ ಅಧ್ಯಕ್ಷ ಆನಂದ್ ಸಿ ಕುಂದರ್ ,ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಮತ್ತಿತರರು ಉಪಸ್ಥಿತರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!