ಕಾರ್ಮಿಕರ ನೋವು ಸರಕಾರ ಆಲಿಸಲಿದೆ ಸಚಿವ ಕೋಟ ಆಶಯ

ಕೋಟ: ಟೈಲರ್ ವೃತ್ತಿ ಎಂಬುವುದು ಪುರಾತನ ಕಾಲದಿಂದಲೂ ಬಂದAತಹ
ವೃತ್ತಿಯಾಗಿದ್ದು ಅದರ ದುಗುಡ ದುಮ್ಮಾನಗಳಿಗೆ ಸರಕಾರ ಸದಾ
ಸ್ಪಂದಿಸಲಿದೆ ಎಂದು ಸಮಾಜಕಲ್ಯಾಣ, ಹಿoದುಳಿದ ಕಲ್ಯಾಣ ಖಾತೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಭಾನುವಾರ ಕೋಟದ ಕಾರಂತ ಥೀಂ ಪಾಕ್೯ ನಲ್ಲಿ ಕರ್ನಾಟಕ ಸ್ಟೇಟ್ ಟೈಲರ್
ಅಸೋಸಿಯೇಷನ್ ಮಂಗಳೂರು ಇದರ ಕೋಟ ಸಾಲಿಗ್ರಾಮ ವಲಯ
ಸಮಿತಿ ಆಶ್ರಯದಲ್ಲಿ ಟೈಲರ್ಸ್ ಡೇ ಪ್ರಯುಕ್ತ ಅಶಕ್ತರಿಗೆ ಸಹಾಯ,ಹಿರಿಯ ವೃತ್ತಿಬಾಂಧವರಿಗೆ ಅಭಿನoದನಾ ಸಮಾರಂಭದಲ್ಲಿ ಮಾತನಾಡಿ ಸಂಘಟನಾತ್ಮಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಸಂಸ್ಥೆ ಇದ್ದರೆ ಅದು ಟೈಲರ್ ವೃತ್ತಿ ಸಂಸ್ಥೆ ತನ್ನ
ಇತಿಮಿತಿಯೊಳಗೆ ತನ್ನಲ್ಲಿರುವ ಕಷ್ಟ ಹಾಗೂ ಅನಾರೋಗ್ಯ ಪೀಡಿತರನ್ನು ಸಂತೈಸಿಕೊoಡು ಸಮಾಜದ ಮುಖ್ಯವಾಹಿನಿಯಲ್ಲಿ ಕಾರ್ಯಾಚರಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಸರಕಾರದ ಹಿಂದುಳಿದ ವರ್ಗಗಳ ಇಲಾಖೆಯಿಂದ ಸಿಗುವ
ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ತಳಮಟ್ಟದ ಹೋರಾಟದಿಂದ ಇಂದು
ಹೆಮ್ಮರವಾಗಿ ಸಂಸ್ಥೆ ಬೆಳೆದಿದೆ ಪ್ರತಿ ಬಾರಿ ಸರಕಾರದ ಕದರಟ್ಟುತ್ತಿದ್ದಿರಿ
ಮುಂದಿನ ದಿನಗಳಲ್ಲಿ ಯಶಸ್ಸು ಕಂಡಿತಾ ದೊರಕುತ್ತದೆ ಎಂದು
ಆಶಯ ವ್ಯಕ್ತಪಡಿಸಿದರು. ಕುಂದಾಪುರ ಮಾತಾ ಆಸ್ಪತ್ರೆಯ ನಿರ್ದೇಶಕ ಡಾ.ಸಿ ಪ್ರಕಾಶ್ ತೋಳಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಟೈಲರ್ ಅಸೋಸಿಯೇಷನ್ ಕೋಟ ಸಾಲಿಗ್ರಾಮದ ಅಧ್ಯಕ್ಷ ಗಣೇಶ್ ಪೂಜಾರಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ವೃತ್ತಿ
ಬಾಂಧವರಾದ ನಂದಯ್ಯ ಆಚಾರ್ಯ,ರಾಮಚoದ್ರ ಆಚಾರ್ಯ ಇವರುಗಳನ್ನು ಅಭಿನಂದಿಸಲಾಯಿತು. ಟೈಲರ್ ವೃತ್ತಿಕ್ಷೇತ್ರದ ಅಶಕ್ತರಿಗೆ
ಸಹಾಯಹಸ್ತ ನೀಡಲಾಯಿತು.ಸಮಿತಿಯ ವತಿಯಿಂದ ವಿನೂತನವಾಗಿ ಕ್ಷೇಮನಿಧಿ
ಸ್ಥಾಪಿಸುವ ಸಲುವಾಗಿ ಹುಂಡಿಯನ್ನು ನೀಡಲಾಯಿತು ಮುಖ್ಯ ಅಭ್ಯಾಗತರಾಗಿ ಕೋಟ ಸಹಕಾರಿ ವ್ಯವಸಾಯಕ ಸಂಘ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಅಶ್ವಿನಿದಿನೇಶ್, ತೆಕ್ಕಟ್ಟೆ ಗಣೇಶ್ ಸಿಲ್ಕ್ಸ್ ಮಾಲಿಕ ಅನಂತ
ನಾಯಕ್,ಲತಾ ಹೋಟೇಲ್ ಮಾಲಿಕ ಕೆ.ವೆಂಕಟೇಶ ಪ್ರಭು,ಮoಗಳೂರು ಕದ್ರಿ
ಮಂಜುನಾದೇಶ್ವರ ದೇವಳದ ಟ್ರಸ್ಟಿ ಕುಸುಮ ದೇವಾಡಿಗ,ಕೋಟ ಅಮೃತೇಶ್ವರಿ ದೇವಳದ ಟ್ರಸ್ಟಿ ಎಂ.ಸುಬ್ರಾಯ ಆಚಾರ್ಯ,ಸಮಿತಿ ಹಿರಿಯರಾದ ವಿಶ್ವನಾಥ್ ಜತ್ತನ್, ಮತ್ತಿತರರು ಉಪಸ್ಥಿತರಿದ್ದರು.ಸಮಿತಿಯ ಕಾರ್ಯದರ್ಶಿ ಅವಿನಾಶ್ ಮರಕಾಲ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಚಿಂತಕ ಚಂದ್ರಯ್ಯ
ಆಚಾರ್ಯ ನಿರೂಪಿಸಿದರು. ಸಮಿತಿಯ ಸದಸ್ಯ ಸತೀಶ್ ಪೂಜಾರಿ ವಂದಿಸಿದರು.

ಭಾನುವಾರ ಕೋಟದ ಕಾರಂತ ಥೀಂ ಪಾಕ್೯ ನಲ್ಲಿ ಕರ್ನಾಟಕ ಸ್ಟೇಟ್ ಟೈಲರ್
ಅಸೋಸಿಯೇಷನ್ ಮಂಗಳೂರು ಇದರ ಕೋಟ ಸಾಲಿಗ್ರಾಮ ವಲಯ
ಸಮಿತಿ ಆಶ್ರಯದಲ್ಲಿ ಟೈಲರ್ಸ್ ಡೇ ಪ್ರಯುಕ್ತ ಅಶಕ್ತರಿಗೆ ಸಹಾಯ,ಹಿರಿಯ ವೃತ್ತಿಬಾಂಧವರಿಗೆ ಅಭಿನoದನಾ ಸಮಾರoಭದಲ್ಲಿಸಮಾಜಕಲ್ಯಾಣ, ಹಿoದುಳಿದ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಟೈಲರ್
ಅಸೋಸಿಯೇಷನ್ ಕೋಟ ಸಾಲಿಗ್ರಾಮದ ಅಧ್ಯಕ್ಷ ಗಣೇಶ್ ಪೂಜಾರಿ, ಕೋಟ
ಸಹಕಾರಿ ವ್ಯವಸಾಯಕ ಸಂಘ ಅಧ್ಯಕ್ಷ ಜಿ.ತಿಮ್ಮ ಪೂಜಾರಿ, ಕೋಟತಟ್ಟು ಗ್ರಾ.ಪಂ ಅಧ್ಯಕ್ಷೆ ಅಶ್ವಿನಿದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply