ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ ಮಹಾಸಭೆ.

ಉಡುಪಿ:ಕುಕ್ಕಿಕಟ್ಟೆ: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಸಂಘದ 2020-2021ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ದಿನಾಂಕ 30-10-2021ನೇ, ಶನಿವಾರದಂದು ಸಂಘದ ಅಲೆವೂರು ಶಾಖೆಯ “ಸಮೃದ್ಧಿ” ಸಭಾಭವನದಲ್ಲಿ ಜರಗಿತು.

ಸಂಘದ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿಯವರು ಮಾತನಾಡಿ, ಕೊರೊನಾದಿಂದ ದೇಶದ ಆರ್ಥಿಕ ವ್ಯವಹಾರಗಳು ನಿಧಾನಗತಿಯಲ್ಲಿದ್ದರೂ, ವರದಿ ವರ್ಷದಲ್ಲಿ ಸಂಘವು 300 ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ಮಾಡಿ, 100 ಕೋಟಿ ದುಡಿಯುವ ಬಂಡವಾಳದೊಂದಿಗೆ,  ಸದಸ್ಯರಿಂದ 86 ಕೋಟಿ ಠೇವಣಿ ಸ್ವೀಕರಿಸಿ, 63 ಕೋಟಿ ಹೊರಬಾಕಿ  ಸಾಲ ಹೊಂದಿ, 74ಲಕ್ಷ ನಿವ್ವಳ ಲಾಭ ಗಳಿಸಿದೆ, ಸದಸ್ಯರಿಗೆ ಶೇಕಡಾ 15 ಡಿವಿಡೆಂಡ್‌ನ್ನು ಘೋಷಣೆ ಮಾಡಿದೆ.

ಇದೇ ಸಂದರ್ಭದಲ್ಲಿ ಸಂಘದ ಕಾರ್ಯಕ್ಷೇತ್ರದ ಉತ್ತಮ ಕೃಷಿಕ ಸದಸ್ಯರುಗಳಾದ ಕೆಮ್ತೂರು ಪ್ರಭಾಕರ್ ಹೆಗ್ಡೆ , ಉಗ್ಗಪ್ಪ ಪೂಜಾರಿ ಚಿಟ್ಪಾಡಿ, ಅಬ್ರಹಾಂ ಕೋಟ್ಯಾನ್ ಕೊರಂಗ್ರಪಾಡಿ, ಬೀಚು ಸೇರಿಗಾರ್ತಿ ಬೈಲೂರು, ಸಂಜೀವಿ ನಾಯ್ಕ್ ಅಲೆವೂರು, ಚೆನ್ನಿ ಪೂಜಾರ್ತಿ ಮಾರ್ಪಳ್ಳಿ ಹಾಗೂ ಸ್ವಯಂ ನಿವೃತ್ತಿ ಪಡೆದ ದೈನಿಕ ಠೇವಣಿ ಸಂಗ್ರಾಹಕರಾದ ಕರುಣಾಕರ್ ಪೂಜಾರಿ, ಅನಿಲ್ ಕುಮಾರ್ ಇವರನ್ನು ಸನ್ಮಾನಿಸಲಾಯಿತು.

ಹಾಗೆಯೇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ , ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. ಸಹಕಾರಿ ಡಿಪ್ಲೋಮಾ ಪರೀಕ್ಷೆಯಲ್ಲಿ “ಅತ್ಯುತ್ತಮ ಶ್ರೇಣಿ”ಯಲ್ಲಿ ಉತ್ತೀರ್ಣರಾದ ಸಂಘದ ಸಹಾಯಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಿಜಯಲಕ್ಷ್ಮಿಯವರಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ, ನಿರ್ದೇಶಕರಾದ ಹರೀಶ್ ಸೇರಿಗಾರ್ ಅಲೆವೂರು, ಹರೀಶ್ ದೇವಾಡಿಗ ಕುಕ್ಕಿಕಟ್ಟೆ, ಯತೀಶ್ ಕುಮಾರ್ ಅಲೆವೂರು, ವಿ. ಚಂದ್ರಹಾಸ ಶೆಟ್ಟಿ ಕುಕ್ಕಿಕಟ್ಟೆ , ದಿನೇಶ್ ಕಿಣಿ ಅಲೆವೂರು, ಶ್ರೀಧರ್ ದೇವಾಡಿಗ ಕುಕ್ಕಿಕಟ್ಟೆ, ಶ್ರೀಧರ ಶೆಟ್ಟಿ ಅಲೆವೂರು, ದಿನೇಶ್ ಸಿ.ನಾಯ್ಕ್ ಅಲೆವೂರು, ಕಿಟ್ಟ ಮಾಸ್ಟರ್ ಮಾರ್ಪಳ್ಳಿ, ಶ್ರೀಮತಿ ರಮಾದೇವಿ ಇಂದಿರಾನಗರ, ಶ್ರೀಮತಿ ಲಕ್ಷ್ಮಿ ಚಂದ್ರಶೇಖರ್ ಇಂದಿರಾನಗರ, ವಿಜಯ ಪಾಲನ್ ,ಕುಕ್ಕಿಕಟ್ಟೆ , ಡಿ.ಸಿ.ಸಿ. ಬ್ಯಾಂಕ್ ಪ್ರತಿನಿಧಿಯಾದ ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು.

ನಿರ್ದೇಶಕರಾದ ಅಶೋಕ್ ಕುಮಾರ್, ಅಲೆವೂರು ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶೇಖರ್ ಸುವರ್ಣ, ಮಾರ್ಪಳ್ಳಿ ವರದಿ ವಾಚಿಸಿದರು, ವ್ಯವಸ್ಥಾಪಕರಾದ ಮಂಜೇಶ್ ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷರಾದ ಸತೀಶ್ ದೇವಾಡಿಗ ಕುಕ್ಕಿಕಟ್ಟೆ ಇವರು ವಂದನಾರ್ಪಣೆಗೈದರು.

 
 
 
 
 
 
 
 
 
 
 

Leave a Reply