ಕೊಂಕಣ ರೈಲ್ವೆಯಿಂದ ಜುಲ್ಮಾನೆ.- ಎಸ್. ಎಸ್. ತೋನ್ಸೆ

ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ವೇಗದೂತ, ಅದಕ್ಕಿಂತ ಹೆಚ್ಚಿನ ವೇಗದ ರೈಲುಗಳಿಗೆ ರೈಲು ಬಂದು ನಿಲ್ದಾಣದಿಂದ ಹೊರಡುವ ತನಕ ಟಿಕೆಟ್ ಕೊಡುತ್ತಿದ್ದ ಕಿಟಿಕಿಗಳನ್ನು ಮುಚ್ಚಲಾಗಿದೆ. ಕೇವಲ ಮುಂಗಡವಾಗಿ ಸ್ಥಳ ಕಾದಿರಿಸುವ ಕಿಟಿಕಿಗಳು ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ರೈಲಿಗೆ, ಪ್ರಯಾಣಿಕರ ಸಾಮಾನ್ಯ ರೈಲುಗಳಿಗೆ ಮಾತ್ರ ನಿಲ್ದಾಣದಿಂದ ರೈಲು ಪ್ರಯಾಣ ಪ್ರಾರಂಭಿಸುವ ತನಕ ಟಿಕೆಟ್ ಕೊಡಲಾಗುತ್ತದೆ. ಆದರೆ ಸಾಮಾನ್ಯ ರೈಲಿನಲ್ಲಿ ಪ್ರಯಾಣ ಮಾಡಲಿಚ್ಛಿಸುವವರಿಂದ ವೇಗದೂತ ರೈಲಿನ ಟಿಕೆಟ್ ಮೊತ್ತ ವಸೂಲು ಮಾಡಲಾಗುತ್ತಿದೆ. ಅಂದರೆ ಕೊಂಕಣ ರೈಲ್ವೆ ಪ್ರಯಾಣಿಕರಿಂದ ಜುಲ್ಮಾನೆ ವಸೂಲು ಮಾಡುವಂತಿದೆ ಎನ್ನುವ ಉಡುಪಿ ರೈಲ್ವೆ ಯಾತ್ರಿಕರ ಸಂಘದ ಮಾಜಿ ಸದಸ್ಯ ಎಸ್. ಎಸ್. ತೋನ್ಸೆ ಇದನ್ನು ನಿಲುಗಡೆಗೊಳಿಸಬೇಕು ಎನ್ನುತ್ತಾರೆ.

 
 
 
 
 
 
 
 
 
 
 

Leave a Reply