ಜಿಲ್ಲಾ ಕೇಂದ್ರಕ್ಕೆ ಸ್ಥಾನಕ್ಕೆ ಸಹಾಯಕ ಆಯುಕ್ತರ ನೇಮಕವಾಗಲಿ~ ಕೇಂಜ ಶ್ರೀಧರ ತಂತ್ರಿ

ಕಚೇರಿಗೆ ಸಂಬಂಧಿಸಿದ ಕಡತಗಳು ಹಿಂದಿಗಿಂತಲೂ ಈಗ ಜಾಸ್ತಿ ತನಿಖೆಗೆ ಬರುವ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಓರ್ವ ಸಹಾಯಕ ಆಯುಕ್ತರ ಹುದ್ದೆ ನಿರ್ಮಾಣಗೊಳ್ಳುವ ಅಗತ್ಯವಿದೆ ಎಂದು ಆಗಮ‌ ಪಂಡಿತ ಕೇಂಜ ಶ್ರೀಧರ ತಂತ್ರಿಯವರು ಕಂದಾಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇರುವಾಗ ಇದ್ದಷ್ಟೇ ಸಹಾಯಕ ಆಯುಕ್ತರ ಹುದ್ದೆ ಈಗಲೂ ಅಷ್ಟೇ ಇದೆ. ಆದರೆ ಉಡುಪಿ, ಬ್ರಹ್ಮಾವರ, ಕಾಪು , ಬೈಂದೂರು, ಕುಂದಾಪುರ, ಕಾರ್ಕಳ, ಹೆಬ್ರಿ ತಾಲೂಕುಗಳಾಗಿ ವಿಂಗಡಣೆ ಆದಮೇಲೆ ಮೂರು ತಹಶಿಲ್ದಾರರ ಬದಲು ಏಳು ತಹಶಿಲ್ದಾರರನ್ನು ಸರಕಾರ ನೇಮಿಸಿದೆ.
ಈ ಎಲ್ಲ ತಾಲೂಕುಗಳಿಗೆ ಕುಂದಾಪುರ ತಾಲೂಕಿನಲ್ಲಿ ಓರ್ವ ಸಹಾಯಕ ಆಯುಕ್ತರಿದ್ದಾರೆ. ಕಚೇರಿ ಸಂಬಂಧಿಸಿದ ಕೆಲಸಗಳಿಗೆ ದಕ್ಷಿಣದ ಗಡಿ ಪ್ರದೇಶದಲ್ಲಿರುವ ಹೆಜಮಾಡಿ, ಪಡುಬಿದ್ರೆ ಪರಿಸರದ ಗ್ರಾಮಸ್ಥರು ಜಿಲ್ಲಾ ಕೇಂದ್ರ ಸ್ಥಾನ‌ ಕ್ರಮಿಸಿ ಉತ್ತರದ ಕುಂದಾಪುರದ ಸಹಾಯಕ ಆಯುಕ್ತರನ್ನೇ ಕಾಣಲು ಬರಬೇಕು.
ಕುಂದಾಪುರ ಸಹಾಯಕ ಆಯುಕ್ತರ ಕಾರ್ಯಕ್ಷೇತ್ರ ಮತ್ತು ಕಾರ್ಯ ಬಾಹುಳ್ಯದ ಒತ್ತಡ ಕಡಿಮೆಯಾಗಿ ಜನರಿಗೆ ಅನುಕೂಲ ಹೆಚ್ಚಾಗಲು ಉಡುಪಿ ಜಿಲ್ಲಾ ಕೇಂದ್ರದಲ್ಲಿ ಅಲ್ಲದೆ ಕಾಪು ತಾಲೂಕಿನಲ್ಲಿ ಸಹಾಯಕ ಆಯುಕ್ತರ ಕಚೇರಿ ತೆರೆಯುವಂತೆ ಮಾನ್ಯ ಕಂದಾಯ ಸಚಿವರನ್ನು ಶ್ರೀಧರ ತಂತ್ರಿಯವರು ಒತ್ತಾಯಿಸಿದ್ದಾರೆ.
 
 
 
 
 
 
 
 
 
 
 

Leave a Reply