ಋತು ಬಂಧ- ಬಂಧನವೋ / ಬಿಡುಗಡೆಯೋ ~ಡಾ.ರಾಜಲಕ್ಷ್ಮಿ

ಒಂದು ಸ್ತ್ರೀಯ ಜೀವನ ಚಕ್ರದ ಅವಿಭಾಜ್ಯ ಅಂಗವಾದ ಋತುಬಂಧ ಎಂಬ ಪ್ರಕ್ರಿಯೆಯು ಆಕೆಗೆ ಬಂಧನದ ಭಾವನೆ ತರದೆ ಬಿಡುಗಡೆಯ ಹಾದಿಯಾಗಬೇಕು. ಅಂದಿನ‌ದಿನಗಳಲ್ಲಿ ಆಕೆಯ ಮಾನಸಿ ಕ‌ ಹಾಗು ದೈಹಿಕ ಕ್ಷಮತೆಗಾಗಿ ಮನೆಯ ಎಲ್ಲರೂ ಸಹಕರಿಸುವುದರೊಂದಿಗೆ ಆಕೆಯಲ್ಲೂ ಧನಾತ್ಮ ಕ ಭಾವನೆಗಳನ್ನು ಬೆಳೆಸುವುದರ ಮೂಲಕ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸ ಬಹುದು ಎಂದು ಖ್ಯಾತ  ಸ್ತ್ರೀ ರೋಗ ನಿವಾರಣಾ  ವೈದ್ಯೆ,  ಪ್ರಸೂತಿ ತಜ್ಞೆ  ಡಾ.ರಾಜಲಕ್ಷ್ಮಿ     ಅಭಿಪ್ರಾಯ ಪಟ್ಟರು.ಕೊಡವೂರು ಬ್ರಾಹ್ಮಣ ಮಹಾ ಸಭಾ ತನ್ನ ರಜತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ 26 ನೇ ಸರಣಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅಲೌಕಿಕ ಹಾಗು ಲೌಕಿಕವಾಗಿ ಶಕ್ತಿಮಾತೆ ಯನ್ನು ಹಾಗು ನಮ್ಮ ಜನ್ಮದಾತೆಯನ್ನು ಪೂಜಿಸುವ ವಿಶಿಷ್ಟ ಸಂಸ್ಕೃತಿಯ ಭಾಗವಾಗಿರುವ ನಾವು ದುರ್ಗಾಮಾತೆಯನ್ನು ಪೂಜಿಸಿದ ಈ ಸಂದರ್ಭದಲ್ಲೇ ನಮ್ಮ ಜನ್ಮದಾತೆಯ ಬಗ್ಗೆ ಕಾಳಜಿ ವಹಿಸಲು ಹಮ್ಮಿಕೊಂಡ ಈ ಕಾರ್ಯಾಗಾರ ಅರ್ಥಪೂರ್ಣ ಎಂದು ಶ್ಲಾಘಿಸಿದರು.

ಕೊಡವೂರು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ನಾರಾಯಣ ಬಲ್ಲಾಳ್, ರಜತ‌ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಭಟ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್ , ಶ್ರೀಶ ಭಟ್ , ನಿರ್ಮಲಾ ಮಂಜುನಾಥ್, ಪ್ರೇಮಾ ಬಾಯರಿ, ನಾಗರತ್ನ ಬಲ್ಲಾಳ್ ಉಪಸ್ಥಿತ ರಿದ್ದು ಅವರನ್ನು ಗೌರವಿಸಿದರು.  ಪೂರ್ಣಿಮಾ ಜನಾರ್ದನ್  ಸ್ವಾಗತಿಸಿ  ಕಾರ್ಯಕ್ರಮ    ನಿರೂಪಿಸಿದರು.

 
 
 
 
 
 
 
 
 
 
 

Leave a Reply