ಕಾಶ್ಮೀರ ವಿಜಯ ತಾಳಮದ್ದಳೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿಯ ಸುಶಾಸನ ಸಮಿತಿಯ ಗೌರವಾಧ್ಯಕ್ಷರಾಗಿರುವ ಪೇಜಾವರ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನತೀರ್ಥ ಪಾದಂಗಳವರ ಆಶೀರ್ವಾದಿಂದ ಸುಶಾಸನ ಸಮಿತಿ ಪ್ರಸ್ತುತಿಯಲ್ಲಿ ಈಗಾಗಲೇ ಸ್ವರಾಜ್ಯ ವಿಜಯ ಮತ್ತು ಹೈದರಾಬಾದ್ ವಿಜಯ ತಾಳಮದ್ದಳೆಗಳು ಇತಿಹಾಸ ಸೃಷ್ಟಿಸಿದ ನಂತರ ಇದೀಗ ಉಡುಪಿಯ ಸುಧಾಕರ ಆಚಾರ್ಯರ ನೇತೃತ್ವದಲ್ಲಿ ಕಾಶ್ಮೀರದ ಇತಿಹಾಸವನ್ನು ಸಾರುವ ಕಾಶ್ಮೀರ ವಿಜಯ ತಾಳಮದ್ದಳೆ ಕಾರ್ಯಕ್ರಮವು ಜನವರಿ 28ರಂದು ಮಂಗಳೂರಿನ ಉರ್ವಸ್ಟೋರ್ ಬಳಿಯ ಅಂಬೇಡ್ಕರ್ ಭವನದಲ್ಲಿ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ಹಾಗೂ ಪ್ರಖ್ಯಾತ ಅರ್ಥಧಾರಿಗಳ ಕೂಡುವಿಕೆಯಲ್ಲಿ ಮಧ್ಯಾಹ್ನ 2-30 ರಿಂದ ಜರಗಲಿರುವುದು.

ಇದರ ಆಮಂತ್ರಣ ಪತ್ರಿಕೆಯನ್ನು ಶಾರದಾ ವಿಧ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಕಾಶ್ಮೀರ ವಿಜಯ ತಾಳಮದ್ದಳೆಯ ರೂವಾರಿ ಉಡುಪಿಯ ಸುಧಾಕರ ಆಚಾರ್ಯ, ಪಟ್ಲ ಫೌಂಡೇಶನಿನ ಪದಾಧಿಕಾರಿಗಳಾದ ಪುರುಷೋತ್ತಮ ಭಂಡಾರಿ, ಪ್ರದೀಪ್ ಆಳ್ವ ಕದ್ರಿ, ರವಿ ಶೆಟ್ಟಿ ಅಶೋಕನಗರ, ಪೂರ್ಣಿಮ ರಾವ್ ಪೇಜಾವರ, ಪೂರ್ಣಿಮ ಶಾಸ್ತ್ರಿ, ಅನಿತಾ ಪಿಂಟೋ, ಭಾರತೀಯ ಭೂಸೇನೆಯ ನಿವೃತ್ತ ಸೇನಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ವಿನ್ಸೆಂಟ್ ಡಿಸೋಜ, ಶಾರದಾ ವಿದ್ಯಾಲಯದ ದಯಾನಂದ ಕಟೀಲು, ಖ್ಯಾತ ಯಕ್ಷಗಾನ ಕಲಾವಿದ ಸಂಜಯ್ ಕುಮಾರ್ ಗೋಣಿಬೀಡು, ಸನಾತನದ ನಾಗರಾಜ ಶೆಟ್ಟಿ, ಯೋಗೀಶ್ ರಾವ್ ಮತ್ತು ಪಣಂಬೂರು ಶ್ರೀಧರ ಐತಾಳ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply