​ಪುಳಿಮಾರು ಭವಾನಿ ವಿ. ಶೆಟ್ಟಿ ಇವರಿಗೆ ​ ವಿಶ್ವ ಸಂಸ್ಕ್ರತಿ ಪುರಸ್ಕಾರ

ವೃತ್ತಿಯಿಂದ ನಿವೃತ್ತರಾಗಿದ್ದರೂ ಎಲ್ಲ ಕಾಲದಲ್ಲೂ ಜನರು, ಶಿಷ್ಯರು ಗುರುತಿಸಿ ಗೌರವಿಸುವ ಶಿಕ್ಷಕ ವೃತ್ತಿ ಪೂಜನೀಯವಾದದು. ನಿತ್ಯ ಜನ ಮನ್ನಣೆ ಪಡೆಯುವಂತದ್ದು ಎಂದು ಕಸಾಪ ವಿಶ್ವ ಸಂಸ್ಕ್ರತಿ ಪುರಸ್ಕಾರ ಪುರಸ್ಕ್ರತರಾದ ಭವಾನಿ ವಿ. ಶೆಟ್ಟಿ ಪುಳಿಮಾರು ಅಭಿಪ್ರಾಯ ಪಟ್ಟರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದಿಂದ ಗೃಹಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕರ ದಿನಾಚರಣೆ ನಿವೃತ್ತ ಶಿಕ್ಷಕರಲ್ಲಿ ಸಾರ್ಥಕ ಹಾಗು ಸಂತಸದ ಭಾವ ತುಂಬುತ್ತದೆ ಎಂದರು.

ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ. ಶಂಕರ್ , ನರಸಿಂಹ ಮೂರ್ತಿ, ರಾಘವೇಂದ್ರ ಪ್ರಭು ಕರ್ವಾಲು, ಚಂದ್ರಶೇಖರ್ ಶೆಟ್ಟಿ, ಸುಲೋಚನ ಶೆಟ್ಟಿ, ಉಪಸ್ಥಿತರಿದ್ದರು.

ಕಸಾಪ ಉಡುಪಿ ಜಿಲ್ಲಾ ಮಹಿಳಾ ಪ್ರತಿನಿಧಿ ಪೂರ್ಣಿಮಾ ಜನಾರ್ದನ್ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ಕಸಾಪ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್.ಪಿ ಪ್ರಸ್ತಾಪಿಸಿ, ಧನ್ಯವಾದವಿತ್ತರು. ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply