ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಚಾತುರ್ಮಾಸ ವ್ರತ ಸಂಕಲ್ಪಿತರಾದ ಶ್ರೀಪಾದರುಗಳಿಗೆ ಗುರುವಂದನೆ

ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಚಾತುರ್ಮಾಸ ವ್ರತ ಸಂಕಲ್ಪಿತರಾದ ಶ್ರೀಪಾದರುಗಳಿಗೆ ಗುರುವಂದನೆ ಸಲ್ಲಿಸ ಲಾಯಿತು. ಮೊದಲಿಗೆ ಶ್ರೀ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಲಾಯಿತು. ಅವರು ಆಶೀರ್ವಚನ ನೀಡಿ ಮಾತನಾಡುತ್ತಾ ಯುವ ಬ್ರಾಹ್ಮಣ ಪರಿಷತ್ ಅನೇಕ ವರ್ಷಗಳಿಂದ ಸಮಾಜದ ಅಶಕ್ತರಿಗೆ ಅಗತ್ಯ ಇರುವಾಗ ಸಹಾಯ ಹಸ್ತ ನೀಡುತ್ತಾ ಬಂದಿದ್ದು ಅನೇಕ ಜನೋಪಯೋಗಿ ಯೋಜನೆಗಳ ಮೂಲಕ ಸಮಾಜದ ಬಾಂಧವರ ಬೆನ್ನೆಲುಬಾಗಿ ನಿಂತು ಸರ್ವರಿಗೂ ಸಹಕಾರಿಯಾಗಿದೆ.

ಪರಿಷತ್ತಿನ ಕಾರ್ಯ ಚಟುವಟಿಕೆಗಳು ‌ ಮುಂಬರುವ ದಿನಗಳಲ್ಲೂ ಇದಕ್ಕಿಂತ ಹೆಚ್ಚಿನ ರೀತಿಯಲ್ಲಿ ಆಗುತ್ತಿದ್ದು ಇತರ ಸಂಘಟನೆಗಳಿಗೂ ಮಾದರಿಯಾಗಲಿ ಎಂದು ಹರಸಿದರು. ಅನಂತರ ಪುತ್ತಿಗೆ ಕಿರಿಯ ಶ್ರೀಪಾದರಾದ ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಗುರುವಂದನೆ ಸಲ್ಲಿಸಲಾಯಿತು. ಅವರು ಆಶೀರ್ವಚನ ನೀಡಿ ಮಾತನಾಡುತ್ತಾ ವಿಪ್ರ ಸಂಘಟನೆಗಳ ಸದಸ್ಯರು ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಗುರು ದರ್ಶನಕ್ಕೆ ಆಗಮಿಸಿರುವುದು ಬಹಳ ಸಂತೋಷ ತಂದಿದೆ.

ವಿಪ್ರ ಸಂಘಟನೆಗಳು ಇನ್ನಷ್ಟು ಒಟ್ಟಾಗಿ ತಮ್ಮ ಕೈಲಾದ ಗರಿಷ್ಠ ಸಹಾಯವನ್ನು ಸಮಾಜಕ್ಕೆ ಮಾಡುತ್ತಾ ಸದೃಢ ಸಮಾಜ ಕಟ್ಟುವಂತಾಗಬೇಕು. ಇಂತಹ ಕೆಲಸ ಕಾರ್ಯಗಳಿಗೆ ದೇವಬಲ ಯಾವಾಗಲೂ ಇರುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ., ಕಾರ್ಯದರ್ಶಿ ವಿವೇಕಾನಂದ ಎನ್. ಸದಸ್ಯರಾದ ಎಂ .ಎಸ್. ವಿಷ್ಣು, ಕೆ.ರಘುಪತಿ ರಾವ್, ಚಂದ್ರಕಾಂತ ಕೆ.ಎನ್. ,ರವೀಂದ್ರ ಆಚಾರ್ಯ, ಸುರೇಶ ಕಾರಂತ್, ರಮೇಶ್ ತೀರ್ಥಹಳ್ಳಿ, ನಾರಾಯಣ ರಾವ್, ದಿನೇಶ್ ಕಲ್ಯಾಣಿ, ಸುಬ್ರಹ್ಮಣ್ಯ ಭಟ್, ಪದ್ಮಲತಾ ವಿಷ್ಣು, ಸುಮಿತ್ರ ಕೆರೆಮಠ, ಸುಮನ ಆಚಾರ್ಯ, ಜ್ಯೋತಿ ಲಕ್ಷ್ಮಿ, ಜಯಮಾಲಾ, ರವಿಪ್ರಕಾಶ್ ಭಟ್, ವಿಜಯ ಭಟ್, ಜಯರಾಮ ಆಚಾರ್ಯ, ಮಂಜುನಾಥ ರಾವ್, ರಮಾಕಾಂತ ಭಟ್, ರಮೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.

 

 
 
 
 
 
 
 
 
 
 
 

Leave a Reply