ವಿಶೇಷ ಮಕ್ಕಳ ಶಾಲೆಯ ಶಿಕ್ಷಕರಿಗೆ ಮಹತ್ತರ ಜವಾಬ್ದಾರಿ ಇದೆ~ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ

ಉಡುಪಿ ವಿಶೇಷ ಮಕ್ಕಳ ಶಿಕ್ಷಕರ- ಶಿಕ್ಷಕ ದಿನಾಚರಣೆ
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟವ್ ಸೋಸೈಟಿ.ಲಿ. ಉಡುಪಿ, ಲಯನ್ಸ್ ಜಿಲ್ಲೆ ೩೧೭ ಸಿ ಮತ್ತು ಲಿಯೋ ಕ್ಲಬ್ ೩೧೭ ಸಿ, ಲಯನ್ಸ್ ಕ್ಲಬ್ ಮತ್ತು ಅಯೋ ಕ್ಲಬ್ ಉಡುಪಿ ಇಂದ್ರಾಳಿ, ಆಶಾ ನಿಲಯ ವಿಶೇಷ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಕೇಂದ್ರ, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘ, ಉಡುಪಿ ಜಿಲ್ಲೆಇವರ ಸಂಯುಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಮಂಗಳವಾರ ಉಡುಪಿ ಶಾಂತಿನಗರದ ಆಶಾ ನಿಲಯ ವಿಶೇಷ ಮಕ್ಕಳ ವಸತಿಯುತ ಶಾಲೆಯಲ್ಲಿ ನಡೆಯಿತು.
ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ,  ವಿಶೇಷ ಮಕ್ಕಳ ಶಾಲೆಯ ಶಿಕ್ಷಕರಿಗೆ ಮಹತ್ತರ ಜವಾಬ್ದಾರಿ ಇದೆ ಅವರಿಗೆ ತಾಳ್ಮೆ, ಸಹನೆ, ಸೇವಾ ಮನೋಭಾವನೆ ಮತ್ತು ನಿಸ್ವಾರ್ಥ ಸೇವೆಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕು ಆಗ ಮಾತ್ರ ವಿಶೇಷ ಮಕ್ಕಳ ಅಭಿವೃದ್ದಿ ಸಾಧ್ಯ ಎಂದರು.
ವಿಶೇಷ ಮಕ್ಕಳಲ್ಲಿ ಧನಾತ್ಮಕ ಶಕ್ತಿಯನ್ನು ತುಂಬಿಸಿ, ಬೆಳೆಸುವ ಕೆಲಸ ಆಗಬೇಕಿದೆ ಎಂದರು.  ಮಂಗಳೂರು ಬಲ್ಮಠ ಕರ್ನಾಟಕ ಸದರ್ನ್ ಡಯಾಸಿಸ್‌ನ ಧರ್ಮಾಧ್ಯಕ್ಷ  ರೆ. ಹೇಮಚಂದ್ರ ಕುಮಾರ್  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶೆಷ ಶಾಲೆಯ ಶಿಕ್ಷಕರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ತಾಯ್ತನದ ಧಾರೆಯೆರದು ಮಕ್ಕಳನ್ನು ಪೋಷಿಸುತ್ತಾರೆ. ಅವರಿಗೆ ಸರಕಾರದ ಸೌಲಭ್ಯಗಳು ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ., ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು ನಿರ್ದೇಶಕ ಲಯನ್ಸ್ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಮಸ್ಯೆಗಳಿಗೆ ನಾವು ಸ್ಪಂದಿಸಿ, ಸರಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ  ವಿಶೇಷ ಶಿಕ್ಷಕರನ್ನು ಹಾಗೂ ಶಿಕ್ಷಕೇತರರನ್ನು ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ್, ಲಯನ್ಸ್ ಜಿಲ್ಲೆ ೩೧೭ ಲಯನ್ಸ್ ನೇರಿ ಕರ್ನಲಿಯೋ, ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸ್ಯಾಟಿ ಲಿ., ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್, ಕರ್ನಾಟಕ ಸದರ್ನ್ ಡಯಾಸಿಸ್‌ನ ಉಪಾಧ್ಯಕ್ಷ ರೆವೆ.ವಿಕ್ಟರ್, ಖಜಾಂಚಿ ವಿನ್ಸೆಂಟ್ ಪಾಲನ್, ಪ್ರಾದೇಶಿಕ ಪರಿಷತ್ತಿನ ವಲಯಾಧ್ಯಕ್ಷ ರೆವೆ.ಐವನ್ ಡಿಸೋನ್ಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ವಿಕಲಚೇತನರ ಕಲ್ಯಾಣಾಕಾರಿ ರಾಮದಾಸ ಕೆ.ಜಿ, ಪಿ.ಎಸ್.ಐ ಜ್ಯುಬಲಿ ದೇವಾಲಯದ ಸಭಾಪಾಲಕ .ಕಿಶೋರ್, ಲಿಯೋ ಜಿಲ್ಲೆ ಚಯರ್‌ಮ್ಯಾನ್ ಲಿಯೋ ಆದಿತ್ಯ ಶೆಟ್, ಆಶಾನಿಲಯ ಶ್ರೇಯೋಭಿವೃದ್ಧಿ ಸಮಿತಿ, ಉಡುಪಿ  ಇದರ ಕಾರ್ಯದರ್ಶಿ ಸ್ಟೀಫನ್ ವಿ. ಕರ್ಕಡ, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘದ ಗೌರವಾಧ್ಯಕ್ಷೆ ಆಗ್ನೆಸ್ ಕುಂದರ್, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘದ ರಾಜ್ಯಾಧ್ಯಕ್ಷೆ ಡಾ.ಕಾಂತಿ ಹರೀಶ್, ಜಯವಿಠಲ್, ಸಾಧನಾ ಕಿಣಿ, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರರ ಸಂಘದ ಜಿಲ್ಲಾ ಅಧ್ಯಕ್ಷ ರವೀಂದ್ರ ಹೆಚ್., ಕಾರ್ಯದರ್ಶಿ ಶಶಿಕಕಲಾ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಸಂಘಸಂಸ್ಥೆಗಳ ಪಧಾದಿಕಾರಿಗಳು, ವಿಶೇಷ ಶಿಕ್ಷಕರ ಹಾಗೂ ಶಿಕ್ಷಕೇತರರ ಸಂಘದ ಪಧಾದಿಕಾರಿಗಳು, ವಿಶೇಷ ಶಿಕ್ಷಕರುಗಳು ಉಪಸ್ಥಿತರಿದ್ದರು. ಆಶಾ ನಿಲಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ಮುಖ್ಯೋಪಾಧ್ಯಾಯಿನಿ ಶಶಿಕಲಾ ಕೋಟ್ಯಾನ್ ಸ್ವಾಗತಿಸಿ, ವಾಗ್ಜ್ಯೋತಿ ಸಂಸ್ಥೆಯ ಮುಖ್ಯಸ್ಥ ರವೀಂದ್ರ ಹೆಚ್. ಪ್ರಾಸ್ತಾವಿಸಿ, ಆಶಾ ನಿಲಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ಶಿಕ್ಷಕಿ ಶೈಲಾ ಅಮ್ಮಣ್ಣ ನಿರೂಪಿಸಿದರು. ಪಾಂಬೂರು ಮಾನಸ ವಿಶೇಷ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಎನ್ಸಿಲಾ ವಂದಿಸಿದರು.
 
 
 
 
 
 
 
 
 
 
 

Leave a Reply