ಉಡುಪಿ ವಲಯ ಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ

ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಉಡುಪಿ ವಲಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕಿಯರ ಕರಾಟೆ ಸ್ಪರ್ದೆಗಳು ಜುಲೈ ೧೯.೦೭.೨೦೨೨ರಂದು ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಡಾ| ಟಿ.ಎಂ.ಎ ಪೈ ವೇದಿಕೆಯಲ್ಲಿ ಜರುಗಿತು

ಈ ಕರಾಟೆ ಸ್ಪರ್ಧೆಗಳ ಉದ್ಘಾಟನೆಯನ್ನು ದೀಪ ಬೆಳಗಿಸುವುದರ ಮೂಲಕ ಶಾಲಾ ಸಂಚಾಲಕರಾದ ಶ್ರೀ ಕೆ ಅಣ್ಣಪ್ಪ ಶೆಣೈಯವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಶೋಕ್ ಕಾಮತ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಡುಪಿ ವಲಯ, ಕರಾಟೆ ಸ್ಪರ್ಧಿಗಳನ್ನು ಕುರಿತು ಮಾತನಾಡಿ ಕರಾಟೆ ಕ್ರೀಡೆಯ ಜೊತೆಗೆ ಚೆನ್ನಾಗಿ ಓದಿ ಸತ್ಪçಜೆಗಳಾಗಿ ಬಾಳ ಬೇಕೆಂದು ಪ್ರೆರೇಪಿಸಿದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಸತೀಶ್ ಸಾಲಿಯಾನ್, ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರು ಕರಾಟೆಯ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಉಡುಪಿ ವಲಯದ ಸಿ.ಆರ್.ಪಿ ಶ್ರೀಮತಿ ಸರಿತಾ ಉಡುಪಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ್ ಕುಂದಾಪುರ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೆ ರತ್ನಾಕರ ಶೆಣೈ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಹೆಗ್ಡೆ ಆತ್ರಾಡಿ ದೈಹಿಕ ಶಿಕ್ಷಣ ಶಿಕ್ಷಕರಾದ ವಿನಯ ಕುಮಾರ್ ಹಾಗೂ ವಿದ್ಯಾಧರ್ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂದ್ರಾಳಿ ಅಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೆ ವಿನಾಯಕ ಕಿಣಿಯವರು ಗಣ್ಯರನ್ನು ಸ್ವಾಗತಿಸಿದರು. ಇಂದ್ರಾಳಿ ಅಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಶ್ಮಾ ವಂದನಾರ್ಪಣೆಗೈದರು. ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶ್ರೀಮತಿ ಅರುಣಾ ಕಾಮತ್ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply