ಸುಧಾಕರ ಆಚಾರ್ಯ ಅವರ ಕಲಾಪ್ರೇಮ ಪ್ರಶಂಸನೀಯ.. ಕಾಣಿಯೂರು ಶ್ರೀ ಪಾದರು

ಉಡುಪಿ: ಧಾರ್ಮಿಕ ಕ್ಷೇತ್ರವಾಗಿರುವ ಉಡುಪಿ, ಸಾಂಸ್ಕೃತಿಕ ಕ್ಷೇತ್ರವೂ ಹೌದು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಉಡುಪಿ ಕೊಡುಗೆ ಮಹತ್ತರ ಎಂದು ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹೇಳಿದರು.

ಸ್ವಾತಂತ್ರ್ಯೋತ್ಸವ ಪ್ರಯುಕ್ತ ಸೋಮವಾರ ಇಲ್ಲಿನ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಯಕ್ಷ ಗಜಮುಖ ಸೇವಕ ಸುಧಾಕರ ಆಚಾರ್ಯ ಅವರ ಕಲಾರಾಧನೆಯ ಯಕ್ಷಗಾನ ಅಮೃತ ರಸಧಾರೆ ಕಾರ್ಯಕ್ರಮದಲ್ಲಿ ವಿಶೇಷ ಸಭಾ ಕಾರ್ಯಕ್ರಮದಲ್ಲಿ ಪಂಚ ದೀಪಗಳನ್ನು ಪ್ರಜ್ವಲಿಸಿ, ಆಶೀರ್ವಚನ ನೀಡಿದರು.

ಸುಧಾಕರ ಆಚಾರ್ಯ ಅವರ ಕಲಾಪ್ರೇಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಪಾದರು, ತಮ್ಮ ಪರ್ಯಾಯಾವಧಿಯಲ್ಲಿ ರಾಜಾಂಗಣದಲ್ಲಿ ತೆಂಕು ತಿಟ್ಟಿನ ಯಕ್ಷಗಾನವನ್ನು ದೊಂದಿ ಬೆಳಕಿನಲ್ಲಿ ವಿಶಿಷ್ಟವಾಗಿ ಆಯೋಜಿಸಿದ್ದನ್ನು ಸ್ಮರಿಸಿದರು.

ಸುಧಾಕರ ಆಚಾರ್ಯ ಅವರಂಥ ಕಲಾಪ್ರೇಮಿಗಳಿಂದ ಕಲೆ, ಕಲಾವಿದರ ಅಭಿವೃದ್ಧಿ ಸಾಧ್ಯ ಎಂದವರು ಹೇಳಿದರು.

ಸಂಸ್ಕೃತಿ ಬೆಳೆಸುವ ಕಾರ್ಯ ಪ್ರಶಂಸನೀಯ
ಅಭ್ಯಾಗತರಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಖಾತೆ ಸಚಿವ ವಿ. ಸುನಿಲ್ ಕುಮಾರ್, ಸ್ವಾತಂತ್ರ್ಯೋತ್ಸವದ ಕಾಲಘಟ್ಟದಲ್ಲಿ ಸಂಸ್ಕೃತಿ ಉಳಿಸಿ, ಬೆಳೆಸುವ ಕಾರ್ಯ ಶ್ಲಾಘನೀಯ.

ಓರ್ವ ವ್ಯಕ್ತಿಯಾಗಿ ಕಳೆದ 32 ವರ್ಷದಿಂದ ಅನೂಚಾನವಾಗಿ ಕಲೆ ಸಂಸ್ಕೃತಿ ರಕ್ಷಣೆಯಲ್ಲಿ ತೊಡಗಿರುವ ಸುಧಾಕರ ಆಚಾರ್ಯ ಕಾರ್ಯ ಪ್ರಶಂಸನೀಯ. ಅದು ಇತರರಿಗೆ ಮಾದರಿ ಎಂದರು.

ಪ್ರಧಾನಿ ಮೋದಿ ಆಶಯದಂತೆ ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನವಭಾರತ ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ ಎಂದು ಸಚಿವ ಸುನಿಲ್ ಹೇಳಿದರು.

ಶಾಸಕ ರಘುಪತಿ ಭಟ್ ಶುಭ ಹಾರೈಸಿದರು.

ಪತ್ರಕರ್ತ ಮನೋಹರ ಪ್ರಸಾದ್ ನಿರೂಪಿಸಿದರು.

ಅಭ್ಯಾಗತರಾಗಿ ಕರ್ನಾಟಕ ಬೆಂಗಳೂರಿನ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಉದ್ಯಮಿಗಳಾದ ಪುರುಷೋತ್ತಮ ಶೆಟ್ಟಿ ಮಣಿಪಾಲ, ಗುರ್ಮೆ ಸುರೇಶ ಶೆಟ್ಟಿ ಕಾಪು, ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ, ಮಂಗಳೂರು ಇನ್ ಸ್ಟಿಟ್ಯೂಟ್ ಆಫ್ ಆ್ಯಂಕೋಲಜಿ ನಿರ್ದೇಶಕ ಡಾ. ವೈ. ಸನತ್ ಹೆಗ್ಡೆ, ತುಳುಕೂಟ ಉಡುಪಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಯಕ್ಷಧ್ರುವ ಫೌಂಡೇಶನ್ ಕೇಂದ್ರ ಮಹಿಳಾ ಘಟಕ ಅಧ್ಯಕ್ಷೆ ಪೂರ್ಣಿಮಾ ಯತೀಶ ರೈ ಆಗಮಿಸಿದ್ದರು.

ಬಹುಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಜ್ಯೋತಿಷಿ ಕಬಿಯಾಡಿ
ಜಯರಾಮ ಆಚಾರ್ಯ ಮತ್ತು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ, ವಕೀಲ ಸದಾನಂದ ಆಸ್ರಣ್ಣ ಶುಭ ಕೋರಿದರು.

ಯಕ್ಷಧ್ರುವ ಪಟ್ಲ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಪಟ್ಲ ಸತೀಶ ಶೆಟ್ಟಿ ಶುಭಾಶಂಸನೆಗೈದರು.

ಸನ್ಮಾನ
ಈ ಸಂದರ್ಭದಲ್ಲಿ ಕೊರಗ ಸಮುದಾಯದ ಮೊದಲ ಪಿಎಚ್.ಡಿ. ಪದವೀಧರೆ ಡಾ| ಸಬಿತಾ, 75ರ ಹರೆಯದಲ್ಲಿ ಪಿಎಚ್.ಡಿ. ಪದವಿ ಪಡೆದ ಡಾ| ಉಷಾ ಚಡಗ, ಖ್ಯಾತ ನಾದಸ್ವರ ವಾದಕ ಡಾ| ನಾಗೇಶ ಬಪ್ಪನಾಡು, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಯಕ್ಷಗಾನ ಸೇವಾಕರ್ತ ಜೋಕಿಂ ಕೊರೆಯ ನಿಡ್ಡೋಡಿ ಮತ್ತು ಪತ್ರಕರ್ತ ಜಾನ್ ಡಿ’ಸೋಜಾ ಕುಂದಾಪುರ ಅವರನ್ನು ಸುಧಾಕರ ಆಚಾರ್ಯ ಸನ್ಮಾನಿಸಿದರು.

ಯಕ್ಷಧ್ರುವ ಫೌಂಡೇಶನ್ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರು ನಿರೂಪಿಸಿದರು.

ಬಳಿಕ ಭಾರತ ರತ್ನ ಯಕ್ಷಗಾನ ಜೋಡಾಟ ನಡೆಯಿತು.

 
 
 
 
 
 
 
 
 
 
 

Leave a Reply