ಬೈತಡ್ಕ ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು: ಮೂವರು ನಾಪತ್ತೆ

ಕಡಬ : ನಿನ್ನೆ ರಾತ್ರಿ ಸರಿ ಸುಮಾರು 12 ಗಂಟೆ ರಾತ್ರಿಗೆ ನಡೆದ ಮಂಜೇಶ್ವರ-ಪುತ್ತೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ಕಾರೊಂದು ಸೇತುವೆಯಿಂದ ಕೆಳಗೆ ಬಿದ್ದಿರುವ ಅವಘಡದಲ್ಲಿ, ಕಾರು ಪತ್ತೆಯಾಗಿದ್ದು, ಮೂವರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಬೈತಡ್ಕ ಮಸೀದಿಯ ಸಮೀಪವೇ ಇರುವ ಸೇತುವೆಗೆ ಕಾರೊಂದು ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಕ್ಕೆ ಬಿದ್ದಿತ್ತು. ಈ ಕುರಿತು ಬೈತಡ್ಕ ಮಸೀದಿಯ ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದೆ.

ಕಾರು ಸೇತುವೆಯಿಂದ 50 ಮೀಟರ್ ದೂರದಲ್ಲಿ ಪತ್ತೆಯಾಗಿದೆ. ಕಾರಿನಲ್ಲಿ ಮೂರು ಜನ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ನದಿಗೆ ಬಿದ್ದ ಕಾರಣ ಮೂವರೂ ನೀರು ಪಾಲಾಗಿರಬಹುದು ಎಂದು ಶಂಕಿಸಲಾಗಿದೆ. ಸುಳ್ಯ ತಾಲೂಕಿನ ಗುತ್ತಿಗಾರು ಮೂಲದ ಮೂವರು ನೀರು ಪಾಲಾದ ದುರ್ದೈವಿಗಳೆಂದು ಹೇಳಲಾಗಿದೆ. ಜೋರು ಮಳೆಯ ಜಾರುವ ರಸ್ತೆಯಲ್ಲಿ, ಅಪಾಯಕಾರಿ ಅವೈಜ್ಞಾನಿಕ ತಿರುವು ಪಡೆದುಕೊಳ್ಳುವ ಜಾಗದಲ್ಲೇ ಕೊಳ್ಳ ಇರುವುದು ಅಪಘಾತಕ್ಕೆ ಆಹ್ವಾನ ನೀಡಿದಂತೆ. ಅತಿಯಾದ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

ಕಾರು ಪುತ್ತೂರಿನಿಂದ ಕಾಣಿಯೂರು ಕಡೆ ಸಂಚರಿಸುತಿತ್ತು. ಅದು ಮಾರುತಿ 800 ಎಂದು ತಿಳಿದು ಬಂದಿದೆ. ಅಪಘಾತಗೊಂಡ ಈ ಮಾರುತಿ 800 ಕಾರಿನ ಬೋನೆಟ್ ಒಂದು ಭಾಗ ಅಲ್ಲಿ ತಡೆಗೋಡೆಗೆ ಸಿಲುಕಿಕೊಂಡಿದೆ. ಅಪಘಾತದ ವೇಗಕ್ಕೆ ಸೇತುವೆಯ ತಡೆ ಬೇಲಿಯ ಮೂರು ಕಂಬಗಳು ಮುರಿದು ಕಬ್ಬಿಣ ನೇತಾಡುತ್ತಿದೆ. ಅಪಘಾತ ಸಂಭವಿಸಿದ ಸ್ಥಳ ಅಪಾಯಕಾರಿ ತಿರುವು ಆಗಿದ್ದು, ಇಳಿಜಾರಿನಲ್ಲಿ ವೇಗವಾಗಿ ಬರುವವರಿಗೆ ಆ ತಿರುವು ಗೋಚರಿಸದಷ್ಟು ಅಪಾಯಕಾರಿಯಾಗಿದೆ. ಈ ಹಿಂದೆ 3 ವಾಹನಗಳು ಇದೇ ಸ್ಥಳದಲ್ಲಿ ಹೊಳೆಗೆ ಬಿದ್ದಿದ್ದವು.

 
 
 
 
 
 
 
 
 
 
 

Leave a Reply