ಕಡಿಯಾಳಿ 38 ನೇ ವರ್ಷದಸಾಮೂಹಿಕ ವರಮಹಾಲಕ್ಷ್ಮೀ ಪೂಜೆ

ಉಡುಪಿ ವಿಶ್ವ ಹಿಂದೂ ಪರಿಷತ್ , ಮಾತೃ ಮಂಡಳಿ ಕಡಿಯಾಳಿ ಜಂಟಿ ಆಶ್ರಯದಲ್ಲಿ 38 ನೇ ವರ್ಷದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ , ಸಾಮೂಹಿಕ ಕುಂಕುಮಾರ್ಚನೆ – ಆಗಸ್ಟ್ 5 ರಂದು ಕಾತ್ಯಾಯಿನಿಮಂಟಪ ದಲ್ಲಿ ನೆಡೆಯಿತು ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಧಾರ್ಮಿಕ ಪೂಜಾ ವಿಧಾನಗಳನ್ನು ಅರ್ಚಕ ವೃಂದ ದವರು ನೆಡೆಸಿದರು. ನೂರಾರು ಮುತೈದೆಯರು ಸಾಮೂಹಿಕ ಕುಂಕುಮಾರ್ಚನೆ ನೆಡೆಸಿ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯಲ್ಲಿ ಪಾಲ್ಗೊಂಡರು. ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ಕಟ್ಟೆ ರವಿರಾಜ್ ಆಚಾರ್ಯ, ಮುಖ್ಯ ನಿರ್ವಾಹಕರಾದ ಶ್ರೀಮತಿ ಪದ್ಮಾ ಆರ್ , ಬಿಜೆಪಿ ಮಹಿಳಾ ಅಧ್ಯಕ್ಷೆ ವೀಣಾ ಶೆಟ್ಟಿ , ಗೀತಾ ನಾಯಕ್, ನಿರ್ಮಲಾ ಪೈ, ಸುಪ್ರಭಾ ಆಚಾರ್ಯ, ಮಾತೃ ಮಂಡಳಿ ಸದಸ್ಯರು, ವಿವಿಧ ಸಂಘದ ಪದಾಧಿಕಾರಿಗಳುಉಪಸ್ಥಿತರಿದ್ದರು.

Leave a Reply