ಕಾಪು: ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವ ಸಂಭ್ರಮಾಚಾರಣೆನ್ನು ವೈಭವಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಕಾಲ್ನಡಿಗೆ-ಜಾಥಾ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಕಾಲ್ನಡಿಗೆ ಜಾಥಾ ನಡೆಯಿತು.
ಕಾಂಗ್ರೆಸ್ ಮುಖಂಡ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಯವರ ನೇತೃತ್ವದಲ್ಲಿ ಜಾಥಾ ನಡೆಯಿತು. ಕಾಪು ವಿಧಾನಸಭಾ ಕ್ಷೇತ್ರದ ಕಾಲ್ನಡಿಗೆ ಜಾಥಾವು ಕಟಪಾಡಿ ಮಟ್ಟುನಿಂದ ಪ್ರಾರಂಭಗೊಡು, ಕಟಪಾಡಿ -ಸುಭಾಸ್ ನಗರ, ಕುರ್ಕಾಲು – ಶಂಕರಪುರ – ಬಂಟಕಲ್ಲು – ಪಾಂಬೂರು – ಪಂಜಿಮಾರ್ ಮೂಲಕ ಸಾಗಿ, ಶಿರ್ವ ಪೇಟೆಯಲ್ಲಿ ಸಮಾಪಣೆಗೊಂಡಿತು. ಬಳಿಕ ಶಿರ್ವ ಪೇಟೆಯಲ್ಲಿರುವ ಮಹಿಳಾ ಮಂಡಳಿಯ ಸಭಾಂಗಣದಲ್ಲಿ ಸಮಾರೋಪ ಸಭೆ ನಡೆಯಿತು.
ಈ ಸಂದರ್ಭ ಕಾಂಗ್ರೆಸ್ ಮುಖಂಡರಾದ ಅಭಯ ಚಂದ್ರ ಜೈನ್ , ಮಯೂರ್ ಜಯಕುಮಾರ್, ಧ್ರುವ ನಾರಾಯಣ್, ಮಂಜುನಾಥ್ ಭಂಡಾರಿ, ನವೀನ್ ಚಂದ್ರ ಶೆಟ್ಟಿ, ಎಂ ಎ ಗಪೂರ್ ನವೀನ್ ಚಂದ್ರ ಸುವರ್ಣ, ಅಶೋಕ್ ಕುಮಾರ್ ಕೊಡವೂರು, ರಮೇಶ್ ಕಾಂಚನ್, ಹರೀಶ್ ನಾಯಕ್ ಕಾಪು ಮತ್ತಿತರರು ಉಪಸ್ಥಿತರಿದ್ದರು.