ಜನಸಾಮಾನ್ಯರ ರಾಷ್ಟ್ರಪತಿ ಎಂದು ಗುರುತಿಸಲ್ಪಟ್ಟವರು ಭಾರತರತ್ನ ಅಬ್ದುಲ್ ಕಲಾಂ~ ಡಾ. ಜಯಪ್ರಕಾಶ್ ರಾವ್ ಕೆ.

ಉಡುಪಿ: ಜನಸಾಮಾನ್ಯರ ರಾಷ್ಟ್ರಪತಿ ಎಂದು ಗುರುತಿಸಲ್ಪಟ್ಟ ಭಾರತರತ್ನ ಅಬ್ದುಲ್ ಕಲಾಂ ಅವರು ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬಿಯಾಗುವುದನ್ನು ಬಯಸಿದ್ದರು. ಈ ಉದ್ದೇಶಕ್ಕಾಗಿಯೇ ವಿಷನ್ 2020 ಸಾಕಾರಗೊಳಿಸುವ ಉದ್ದೇಶ ಹೊಂದಿದ್ದರು.

ಇದರಿಂದ ಭಾರತದ ರಕ್ಷಣಾ ವೆಚ್ಚದಲ್ಲಿ ಅರವತ್ತು ಶೇಕಡದಷ್ಟು ದೇಶದಲ್ಲೆ ಬಳಕೆಯಾಗಲು ಸಾಧ್ಯವಾಯಿತು. ಈ ದೃಷ್ಟಿಯಿಂದ ವಿಷನ್ 2020 ಪರಿಣಾಮಕಾರಿ ಎಂದು ಖ್ಯಾತ ಲೇಖಕ ಮತ್ತು ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಮಂಡಳಿ ಇದರ ದಕ್ಷಿಣ ಭಾರತ ಪ್ರಾಧಿಕಾರ ಅಧ್ಯಕ್ಷರಾದ ಡಾ. ಜಯಪ್ರಕಾಶ್ ರಾವ್ ಕೆ. ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿ ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಪರಿಷತ್ತು ಮತ್ತು ಸರಕಾರಿ ಪ್ರದವಿಪೂರ್ವ ಕಾಲೇಜು ಇವರ ಸಹಯೋಗದಲ್ಲಿ ನಡೆದ ಕಲಾಂ ಜೀವನ ಧರ್ಮ ಮತ್ತು ವಿಷನ್ ಇಂಡಿಯಾ ೨೦೨೦ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು.

ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ಸಾರ್ವಜನಿಕ ಸಂಪರ್ಕ ಪರಿಷತ್ತಿನ ಉಡುಪಿ ಜಿಲ್ಲಾಧ್ಯಕ್ಷರಾದ ನಾಗರಾಜ ಹೆಬ್ಬಾರ್, ಕಾರ್ಯದರ್ಶಿ ರಾಘವೇಂದ್ರ ಪ್ರಭು, ಐ.ಕ್ಯೂ.ಎ.ಸಿ ಸಂಯೋಜಕ ಡಾ. ಸುರೇಶ್ ರೈ ಕೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ರವಿರಾಜ್ ಎಸ್., ಗಣಕವಿಜ್ಞಾನ ವಿಭಾಗ ಮುಖ್ಯಸ್ಥ ಪ್ರೊ. ಬಸವರಾಜ್ ಯು, ಗಣಿತವಿಜ್ಞಾನ ವಿಭಾಗದ ಮುಖಸ್ಥೆ ಡಾ. ಸುಜಾತ ವಿ ಶೇಟ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಶೆಣೈ ಸ್ವಾಗತಿಸಿ, ಕವನ ವಂದಿಸಿದರು. ವಿನುತ ಅತಿಥಿಗಳನ್ನು ಪರಿಚಯಿಸಿದರು.

 
 
 
 
 
 
 
 
 
 
 

Leave a Reply