ಫೀನಿಕ್ಸ್ ನಲ್ಲಿ ವೈಭವದ ರಥೋತ್ಸವದೊಂದಿಗೆ ಹತ್ತು ದಿನಗಳ ಉತ್ಸವಕ್ಕೆ ತೆರೆ

​ಲೋಕ  ಕಲ್ಯಾಣಕ್ಕಾಗಿ ಅಮೆರಿಕಾದ ಪ್ರಥಮ ದೇವಾಲಯವಾದ ಶ್ರೀ ವೆಂಕಟಕೃಷ್ಣ  ಕ್ಷೇತ್ರ ದಲ್ಲಿ ಒಂಬತ್ತು ದಿನಗಳ ಕಾಲ ನಡೆದ ಸಂಹಿತಾಯಾಗ ಇಂದು ರಥೋತ್ಸವ ರಂಗಪೂಜೆಯೊಂದಿಗೆ ವಿದ್ಯುಕ್ತವಾಗಿ ಸಮಾಪನೆ ಗೊಂಡಿತು. ಬೆಳಿಗ್ಗೆ ಶ್ರೀ ಶ್ರೀನಿವಾಸ ದೇವರಿಗೆ ಪ್ರಸನ್ನ ಕಲಶಾಭಿಷೇಕ ಪೂಜ್ಯ ಶ್ರೀಪಾದರು   ನೆರವೇರಿಸಿದರು.

ಬಳಿಕ ಅನೇಕ ಭಕ್ತ ಜನರ ಸಮ್ಮುಖದಲ್ಲಿ ಸಹಸ್ರ ಗಣಪತ್ಯಥರ್ವ ಶೀರ್ಷ ಯಾಗ  ಸಂಪನ್ನ ಗೊಂಡಿತು. ಸಾಯಂಕಾಲ ಶ್ರೀನಿವಾಸ ದೇವರಿಗೆ ರಂಗಪೂಜೆ  ಥೋತ್ಸವ ನಡೆದು, ಶ್ರೀನಿವಾಸನ ಉತ್ಸವಮೂರ್ತಿಯ ಅಟ್ಟೆಪಲ್ಲಕ್ಕಿ ಕುಣಿತ ಜನರ ವಿಶೇಷ ಮೆಚ್ಚುಗೆ ಗೆ ಪಾತ್ರವಾಯಿತು .

ಈ ಉತ್ಸವದಲ್ಲಿ ಪ್ರಮುಖವಾಗಿ ಚೆಂಡೆ ಸುತ್ತು, ಹರಿಭಜನೆ ಸುತ್ತುಗಳ ನರ್ತನಗಳಿಂದ ಉಡುಪಿಯ ಭವ್ಯ ಉತ್ಸವಪರಂಪರೆಯನ್ನು ಈ ನೆಲದಲ್ಲಿ ಪರಿಚಯಿಸಿದಂತಾಯಿತು. ಪೂಜ್ಯಶ್ರೀಪಾದರು ಈ ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಿದ ವೈದಿಕ ವಿದ್ವಾಂಸ ರನ್ನು ಶಾಲು ಹೊದಿಸಿ ಆಶೀರ್ವದಿಸಿದರು. ಒಟ್ಟಿನಲ್ಲಿ ಹತ್ತು ದಿನಗಳ ಎಡೆಬಿಡದ ಈ ಧಾರ್ಮಿಕ ಉತ್ಸವ ಕಾರ್ಯಕ್ರಮಗಳಿಂದ ಭಕ್ತಜನತೆ ಪುಳಕಿತಗೊಂಡರು.

Leave a Reply