ಹಂಡೆದಾಸ ಪ್ರತಿಷ್ಠಾನ (ರಿ) ಕಾರ್ಕಳದ ವತಿಯಿಂದ ಶ್ರೀಗುರುವೇದವ್ಯಾಸ ದಾಸರ ಪುಣ್ಯತಿಥಿ ಕಾರ್ಯಕ್ರಮ

ಉಡುಪಿ : ಪೇಜಾವರ ಮಠದಲ್ಲಿ,ಹಂಡೆದಾಸ ಪ್ರತಿಷ್ಠಾನ (ರಿ) ಕಾರ್ಕಳ ಇವರ ವತಿಯಿಂದ ಶ್ರೀಗುರುವೇದವ್ಯಾಸ ದಾಸರ ಪುಣ್ಯತಿಥಿಯ ಕಾರ್ಯಕ್ರಮ ನಡೆಯಿತು.

ಪ್ರಾತಕಾಲದಿಂದ ಪ್ರತಿಷ್ಠಾನದ ಸದಸ್ಯರು ಹಂಡೆ ಗುರುವೇದವ್ಯಾಸ ದಾಸರು ರಚಿಸಿದ ಕೀರ್ತನೆಗಳನ್ನು ಹಾಡಿದರು. ಪ್ರತಿಷ್ಠಾನದ ಗೌರವಾಧ್ಯಕ್ಷ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪಟ್ಟದದೇವರ ಪೂಜೆ ನಡೆಸಿ, ದಾಸಪರಂಪರೆಯು ನಮಗೆ ತುಂಬಕೊಡುಗೆಗಳನ್ನು ನೀಡಿದೆ.ಹಂಡೆ ದಾಸರ ಪರಂಪರೆಯೂ ಕೂಡ ಮಾಧ್ವ ಮತಕ್ಕೆ ಸಾವಿರಾರು ಕೀರ್ತನೆಗಳು ಹಾಗೂ ಹರಿಕಥೆಯನ್ನು ರಚಿಸಿ ಸಮಾಜಕ್ಕೆ ನೀಡಿರುತ್ತವೆ.ಇದನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮ ಕರ್ತವ್ಯವಾಗಿದೆ.

ಆ ದೃಷ್ಠಿಯಿಂದ ಪ್ರತಿಷ್ಠಾನದವರು ಆಸಕ್ತಿಯುಳ್ಳ ಬಾಲಮಕ್ಕಳಿಂದ ವಯೋವೃದ್ಧರವರೆಗೆ ವಯಸ್ಸಿನ ನಿರ್ಬಂಧವಿಲ್ಲದೆ ಹರಿಕಥೆ ಹಾಗೂ ಕೀರ್ತನೆಗಳನ್ನು ಕಲಿಸುವುದರ ಮುಖಾಂತರ ತನ್ನ ಸಾಧನೆಯನ್ನು ಮಾಡುತ್ತಿದೆ.ಈ ಕಾರ್ಯ ಮುಂದುವರಿಯಲಿ ಎಂದರು.

ಹಂಡೆ ದಾಸ ಪ್ರತಿಷ್ಠಾನದ ಅಧ್ಯಕ್ಷೆ ರುಕ್ಮಿಣಿ ಹಂಡೆ, ಉಪಾಧ್ಯಕ್ಷ ವೇದವ್ಯಾಸ ಐತಾಳ್,ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply