Janardhan Kodavoor/ Team KaravaliXpress
27.6 C
Udupi
Saturday, July 2, 2022
Sathyanatha Stores Brahmavara

ಪಾಂಗಾಳ ಜೆ.ಎನ್ ಮೋಟರ್ಸ್ ಮಾಲಕ ಹರಿದಾಸ್ ಭಟ್  ನಿಧನ 

ಕುರ್ಕಾಲು ಸುಭಾಷ್ ನಗರ ಬಳಿ ಅಪಘಾತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ಪಾಂಗಾಳ ಜೆ.ಎನ್ ಮೋಟರ್ಸ್ ಮಾಲಕ ಹರಿದಾಸ್ ಭಟ್  ಅವರು ಚಿಕಿತ್ಸೆ ಫಲಕಾರಿಯಾಗದೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 
ಮೃತರು ಪತ್ನಿ ಹಾಗು ಇಬ್ಬರು ಪುತ್ರರನ್ನು ಅಗಲಿದ್ದಾರೆ .  ಶನಿವಾರ ಬೆಳಿಗ್ಗೆ ಸುಭಾಸ್ ನಗರ ಸಮೀಪ ದ್ವಾರದ ಬಳಿ ರಿಕ್ಷಾ ಡಿಕ್ಕಿ ಹೊಡೆದು ಹರಿದಾಸ್ ಭಟ್ ಅವರಿಗೆ ಗಂಭೀರ ಪೆಟ್ಟಾಗಿತ್ತು.  ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಬುಧವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ . 
45 ವರ್ಷಗಳಿಂದ ಸಾರಿಗೆ ಉದ್ಯಮವನ್ನು ನಡೆಸುತ್ತಿದ್ದರು. ದೇಶಾದ್ಯಂತ ಪ್ರವಾಸಿಗರನ್ನು ಕರೆದೊಯ್ದು ಜೆ.ಎನ್. ಭಟ್ ಎಂದೇ ಪರಿಚಿತರಾಗಿದ್ದರು.  ಪಾಂಗಳ ಜನಾರ್ದನ ದೇವಸ್ಥಾನದ ಸೇವಾ ಸಮಿತಿ,   ಗಣೇಶೋತ್ಸವ ಸಮಿತಿ ಜಿಲ್ಲಾ ಟೆಂಪೋ ಚಾಲಕರ ಮತ್ತು ಮಾಲಕರ ಮಾಲಕರ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!