ಗುಂಡ್ಮಿ-ಪ್ರೇಮಕಾವ್ಯ ಗಝಲ್ – ಗೋಪಾಲಕೃಷ್ಣ ನಾಯಿರಿ

ಕೋಟ: ಉರ್ದು ಕಾವ್ಯದ ಕೆನೆಪದರೇ ಆಗಿರುವ ಗಝಲ್ ಪ್ರೇಮಕಾವ್ಯವೂ ಹೌದು. ಇದರ ಮೂಲ ಅರಬರ ಕಸೀದ ಎಂಬoತೆಯೇ ಇರಾನಿನ ಚಾಮ ಕಾವ್ಯಪ್ರೇರಿತ ಎಂಬ ಅಭಿಪ್ರಾಯವಿದೆ. ಕನ್ನಡದಲ್ಲಿ ಇದರ ಪ್ರವರ್ತಕರು ಕವಿ ಶಾಂತರಸರು. ಅಂತಹ ಗಝಲ್‌ಕಾರರಲ್ಲಿ ಸುಮನ ಆರ್. ಹೇರ್ಳೆ ಒಬ್ಬರು ಆಗಿದ್ದಾರೆ ಎಂದು ರಂಗಕರ್ಮಿ ಕೆ. ಗೋಪಾಲಕೃಷ್ಣ ನಾಯಿರಿಯವರು ಸುಮನರವರ ಗಝಲ್ ಕೃತಿ ಬಿಸುಪಿನೆದೆಯ ಕನವರಿಕೆಗಳು ಮತ್ತು ಮುಕ್ತಕ ಸುಮಮಾಲೆ ಎಂಬೆರಡು ಕೃತಿಗಳನ್ನು ಬಿಡುಗಡೆಗೊಳಿಸಿ ಅದರ ಕೆಲವು ಪದ್ಯಗಳ ಮೂಲಕ ಅನಾವರಣಗೈದರು.

ಗುಂಡ್ಮಿಯ ಸದಾನಂದ ರಂಗಮ0ಟಪದಲ್ಲಿ ನಡೆದ ಕೃತಿ ಲೋಕಾರ್ಪಣೆಯ ಸಂದರ್ಭದಲ್ಲಿ ಬೆಂಗಳೂರಿನ ಹರಿನರಸಿಂಹ ಉಪಾಧ್ಯಾಯ ಕೃತಿಪರಿಚಯ ಮಾಡಿದರೆ, ಬೆಳಗಾವಿಯ ಕಕ್ಕೇರಿಯ ಈಶ್ವರ ಜಿ. ಸಂಪಗಾವಿ ಶುಭ ಹಾರೈಸಿದರು. ಎಚ್.ಶ್ರೀಧರ ಹಂದೆಯವರಿoದ ಗಝಲ್ ಗಾಯನ, ರಾಜಶೇಖರ ಹೆಬ್ಬಾರರಿಂದ ಸ್ವಾಗತ, ಅಚ್ಯುತ ಪೂಜಾರಿಯವರಿಂದ ಪ್ರಾರ್ಥನೆ, ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆಯಲ್ಲಿ ಮಹಾಲಕ್ಷ್ಮೀ  ಸೋಮಯಾಜರಿಂದ ಕಾರ್ಯಕ್ರಮ ನಿರ್ವಹಣೆ ಮತ್ತು ವಂದನಾರ್ಪಣೆ ನಡೆದುವು.

ಗುಂಡ್ಮಿಯ ಸದಾನಂದ ರಂಗಮoಟಪದಲ್ಲಿ ನಡೆದ ರಂಗಕರ್ಮಿ ಕೆ. ಗೋಪಾಲಕೃಷ್ಣ ನಾಯಿರಿಯವರು ಸುಮನರವರ ಗಝಲ್ ಕೃತಿ ಬಿಸುಪಿನೆದೆಯ ಕನವರಿಕೆಗಳು ಮತ್ತು ಮುಕ್ತಕ ಸುಮಮಾಲೆ ಎಂಬೆರಡು ಕೃತಿಗಳನ್ನು ಬಿಡುಗಡೆಗೊಳಿಸಿ ಲೋಕಾರ್ಪಣೆಗೈದರು. ಬೆಳಗಾವಿಯ ಕಕ್ಕೇರಿಯ ಈಶ್ವರ ಜಿ. ಸಂಪಗಾವಿ, ಉಡುಪಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply