ಗೋಗ್ರಾಸ ಅರ್ಪಿಸಿದ ಸರ್ಕಾರ

ಬಿಜೆಪಿ ಸರ್ಕಾರ ,ಮುಖ್ಯಮಂತ್ರಿ ಬೊಮ್ಮಾಯಿ , ಸಚಿವ ಪ್ರಭು ಚವಾಣ್ , ಪಶುಸಂಗೋಪನಾ ಇಲಾಖೆ ಅಭಿನಂದನಾರ್ಹರು

ಪ್ರತಿನಿತ್ಯ ನಾವು ಊಟ ಮಾಡುವ ಮೊದಲು ಗೋವುಗಳಿಗೆ ಗೋಗ್ರಾಸ ಅರ್ಪಿಸಿ ಅವುಗಳ ಋಣವನ್ನು ಸಲ್ಲಿಸಿಯೇ ಊಟ ಮಾಡಬೇಕು ಅನ್ನುತ್ತದೆ ವೇದ ಶಾಸ್ತ್ರ ಪುರಾಣಗಳು . ಅದು ನಮ್ಮ ಸಂಸ್ಕೃತಿ ಕೂಡಾ. ಅದೇ ರೀತಿ ಯಾವುದೇ ಸಮಾರಂಭ ಭೋಜನ ಕೂಟ ಇತ್ಯಾದಿಗಳನ್ನು ಮಾಡುವಾಗಲೂ ಗೋಗ್ರಾಸ ಅರ್ಪಿಸುವ ಸತ್ಸಂಪ್ರದಾಯ ರೂಢಿಯಲ್ಲಿದೆ .

ಪ್ರಸ್ತುತ ರಾಜ್ಯ ಬಿಜೆಪಿ ಸರ್ಕಾರ ಅಂಥ ಉದಾತ್ತ ಕರ್ತವ್ಯವೊಂದನ್ನು ನಿರ್ವಹಿಸಿದೆ . ನಾಲ್ಕು ವರ್ಷಗಳ ಬಿಜೆಪಿ ನೇತೃತ್ವದ ಸರ್ಕಾರದ ಅವಧಿ ಇನ್ನೇನು ಮುಗಿಯುತ್ತದೆ ಅನ್ನೋ ಹೊತ್ತಲ್ಲಿ  ರಾಜ್ಯದ ಸುಮಾರು 200 ಗೋಶಾಲೆಗಳ 24,500 ಹಸುಗಳಿಗೆ 27.50 ಕೋಟಿ ರೂ ಆರ್ಥಿಕ ನೆರವನ್ನು ಒಂದೇ ಕಂತಿನಲ್ಲಿ ಪಾವತಿಸಿ ಪ್ರಾಯಃ ರಾಜ್ಯದ ಇತಿಹಾಸದಲ್ಲಿ ಪ್ರಥಮ ಮಾತ್ರವಲ್ಲ ; ದೇಶದಲ್ಲೇ ರಾಜ್ಯ ಸರ್ಕಾರವೊಂದು ಇಂಥ ಹೆಜ್ಜೆಯಿಟ್ಟ ಪ್ರಥಮ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಗೋವಿನ ಬಗ್ಗೆ , ಗೋಸಂರಕ್ಷಣೆಯ ಬಗ್ಗೆ ನೈಜ  ಬದ್ಧತೆ ಮತ್ತು ಹೃದಯಪೂರ್ವಕ ಕಾಳಜಿ ಹೊಂದಿರುವ ಸರ್ಕಾರ ಮಾತ್ರ ಈ ರೀತಿ ನಡೆದುಕೊಳ್ಳಲು ಸಾಧ್ಯ .  ಪುಣ್ಯಕೋಟಿ ಎಂಬ ಗೋಪ್ರೇಮಿಗಳು ಗೋವನ್ನು ಒಂದು ವರ್ಷಕ್ಕೆ  ತಲಾ 11000 ರೂ ನೀಡಿ ದತ್ತು ಪಡೆಯುವ ವಿನೂತನ ಯೋಜನೆಯನ್ನು ಘೋಷಿಸಿ ಅದಕ್ಕೆ ರಾಜ್ಯದ ಗೋಪ್ರೇಮಿಗಳಿಂದ  ಬಂದ ಭರಪೂರ ನೆರವನ್ನು ಗೋಶಾಲೆಗಳಿಗೆ ಹಸ್ತಾಂತರಿಸುವ ಈ ಕಾರ್ಯಕ್ರಮದಿಂದ ನಾಡಿನ ಗೋಶಾಲೆಗಳಿಗೆ ಒಂದಷ್ಡು ಆರ್ಥಿಕ ಚೈತನ್ಯ ಸರ್ಕಾರದ ಮೂಲಕ ದೊರೆತಂತಾಗಿರುವುದು ಅಭಿನಂದನೀಯ .
ಈ ಪುಣ್ಯಕೋಟಿ ಯೋಜನೆಗೆ ಸುಮಾರು 40 ಕೋಟಿ ರೂ ನೆರವು ನೀಡಿ ಸಹಕರಿಸಿದ ರಾಜ್ಯ ಸರ್ಕಾರಿ ನೌಕರರ ಸಂಘವೂ ಸೇರಿದಂತೆ ಉದಾತ್ತವಾಗಿ ಸಹಕರಿಸಿದ ಪ್ರತೊಯೊಬ್ಬರೂ ಕೋಟಿ ಪುಣ್ಯಕ್ಕೆ ಭಾಜನರಾಗಿದ್ದಾರೆ  ಮಾಡಿದ್ದಾರೆ ಅನ್ನೋದು ಅತಿಶಯದ ಮಾತಲ್ಲ .
ಇಂಥ ಮಾದರಿ ಕಾರ್ಯಕ್ರಮ ನಡೆಸಿದ ರಾಜ್ಯ ಬಿಜೆಪಿ ಸರ್ಕಾರಕ್ಕೆ , ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಮಾನ್ಯ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವಾಣ್ ,  ಹಾಗೂ ಇದನ್ನು ಅನುಷ್ಠಾನಗೊಳಿಸಲು ಹಗಲಿರುಳು ಶ್ರಮಿಸಿದ ರಾಜ್ಯ ಪಶುಸಂಗೋಪನಾ ಇಲಾಖೆಯ ಎಲ್ಲಾ ಅಧಿಕಾರಿಗಳು  ಪಶುವೈದ್ಯರು ಸಿಬಂದಿಗಳು  ಅಭಿನಂದನೆಗೆ ಅರ್ಹರು  ಮತ್ತು ಕೋಟಿ ಪುಣ್ಯಸಂಪಾದನೆಯ ಸಹಭಾಗಿಗಳು.
 ನಾಡಿನ ಸಮಸ್ತ ಗೋಪ್ರೇಮಿಗಳೆಲ್ಲರೂ  ಈ ಎಲ್ಲರಿಗೂ ಶ್ರೀ ಗೋಪಾಲಕೃಷ್ಣನ ಕೃಪೆಯನ್ನು ಪ್ರಾರ್ಥಿಸೋಣ.  ಜೈ ಗೋಮಾತಾ
~ಜಿ .ವಾಸುದೇವ ಭಟ್ ಪೆರಂಪಳ್ಳಿ
 
 
 
 
 
 
 
 
 
 
 

Leave a Reply