ಕೇರಳದಲ್ಲಿ ವಿಮಾನ ದುರಂತ -14 ಮಂದಿ ಸಾವು


ಕ್ಯಾಲಿಕಟ್ (ಕೇರಳ)- ದುಬೈನಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡ್‍ಂಗ್ ವೇಳೆ ರನ್ ವೇಯಲ್ಲಿ ಜಾರಿದ ಪರಿಣಾಮ ಪೈಲೆಟ್ ಸೇರಿದಂತೆ 14ಕ್ಕೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಭಾರೀ ಮಳೆ ಸಂದರ್ಭದಲ್ಲೇ ಈ ದುರಂತ ಸಂಭವಿಸಿದೆ.
ಮಂಗಳೂರಿನಲ್ಲಿ ನಡೆದಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಪತನದ ಮಾದರಿಯಲ್ಲಿಯೇ ಈ ಘಟನೆ ನಡೆದಿದೆ.

ಘಟನೆಯಲ್ಲಿ ವಿಮಾನದ ಮುಖ್ಯ ಪೈಲೆಟ್ ದೀಪಕ್ ವಸಂತ್ ಹಾಗೂ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದು, ಅನೇಕ ಮಂದಿ ಪ್ರಯಾಣಕರು ಗಂಭೀರ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ನಾಗರಿಕ ವಿಮಾನಯಾನ ಮಹಾನಿದೇರ್ಶಕರು ತಿಳಿಸಿದ್ದಾರೆ. ಪೈಲಟ್ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈ ಅಪಘಾತದ ತನಿಖೆಗೆ ಆದೇಶಿಸಿದೆ.   


ಗಾಯಾಳುಗಳನ್ನು ಕ್ಯಾಲಿಕಟ್ ಅಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದಲ್ಲಿ 190 ಮಂದಿ ಪ್ರಯಾಣಿಕರು, ಅವರಲ್ಲಿ 10 ಮಂದಿ ಮಕ್ಕಳು ಹಾಗೂ 5 ಮಂದಿ ಸಿಬ್ಬಂಧಿ ಸೇರಿದಂತೆ 195 ಮಂದಿ ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಸ್ಥಳಕ್ಕೆ ಎನ್ ಡಿಆರ್ ಎಪ್ ತಂಡ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. 24 ಕ್ಕೂ ಅಂಬುಲೆನ್ಸ್ ಗಳು ಗಾಯಾಳುಗಳನ್ನು ಅಸ್ಪತ್ರೆಗೆ ಕರೆದೊಯ್ಯುವ ಕಾರ್ಯದಲ್ಲಿ ತೊಡಗಿವೆ.
ಅಪಘಾತದ ಭೀಕರತೆಗೆ ವಿಮಾನ ಎರಡು ತುಂಡಾಗಿದೆ. ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.


ದುಬೈನಿಂದ ಹೊರಟಿದ್ದ ವಂದೇ ಮಾತರಂ ಗೆ ಸೇರಿದ ಏರ್ ಇಂಡಿಯಾ ವಿಮಾನ ಕ್ಯಾಲಿಕಟ್ ಗೆ ರಾತ್ರಿ 7.45 ಕ್ಕೆ ಆಗಮಿಸಿತು. ಲ್ಯಾಂಡಿಗ್ ಆಗುವ ಸಂದರ್ಭದಲ್ಲಿ ಅಪ್ಪಳಿಸಿದ ಪರಿಣಾಮ ವಿಮಾನ ರನ್ ವೇಗೆ ಬಿಟ್ಟು ಜಾರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಮ ರೋಪಾದಿಯಲ್ಲಿ ಎನ್ ಡಿಆರ್‍ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಕೇರಳ ಪೊಲೀಸ್ ಅಧಿಕಾರಿಗಳ ಪ್ರಕಾರ ಕನಿಷ್ಠ 35 ಮಂದಿ ಗಾಯಗೊಂಡಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

12.05: ವಿಮಾನ ದುರಂತದಲ್ಲಿ ಮಡಿದವರ ಸಂಖ್ಯೆ 20 ಕ್ಕೆ ಏರಿಕೆ

 

 

 
 
 
 
 
 
 
 
 
 
 

Leave a Reply