ಕರ್ನಾಟಕ ರಾಜಕೀಯ ಕುರುಕ್ಷೇತ್ರಕ್ಕೆ ಮೂಹೂರ್ತ ಫಿಕ್ಸ್

ಮೇ10, 2023~ ಬುಧವಾರ~  ಚುನಾವಣೆ ~ ಮೇ 13ಕ್ಕೆ  ಮತ ಎಣಿಕೆ
ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಕರ್ನಾಟಕದ 224 ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ.  ಮೊದಲ ಬಾರಿ ಮತದಾನ ಮಾಡಲಿರುವವರು  9,17,241. 
 
16 ಸಾವಿರ ಮಂದಿ ಶತಾಯುಷಿ ಮತದಾರರು ಕರ್ನಾಟಕದಲ್ಲಿದ್ದಾರೆ. 80ವರ್ಷದ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶವನ್ನು ಆಯೋಗ ಮೊದಲ ಭಾರಿಗೆ ಕಲ್ಪಿಸಿವೆ. ಇವರೆಲ್ಲರೂ ಮೊದಲೇ ಆಯೋಗದಲ್ಲಿ ನೋಂದಾಯಿಸಿ ಕೊಳ್ಳಬೇಕು . 
 
400ಕ್ಕೂ ಹೆಚ್ಚು ಇಕೋ ಫ್ರೆಂಡ್ಲಿ ಮತದಾನ ಕೇಂದ್ರಗಳು ಇವೆ. ಮತದಾನ ಹೆಚ್ಚಳಕ್ಕೆ ಜಾಗ್ರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ಇಂದಿನಿಂದಲೇ ರಾಜ್ಯದಲ್ಲಿ  ನೀತಿ ಸಂಹಿತೆ ಜಾರಿ. ಚುನಾವಣಾ ಅಕ್ರಮ ತಡೆಯಲು ಎಲ್ಲ ತನಿಖಾ ಸಂಸ್ಥೆಗಳ ಬಳಕೆ. 2400 ತಂಡಗಳ ರಚನೆ. 
 
 
 
 
 
 
 
 
 
 
 
 

Leave a Reply