ಎಲ್ಲಾ ಪ್ರತಿಭಾವಂತರೂ ಹೃದಯವಂತ ರಾಗಿರುವುದಿಲ್ಲ ~ ಡಾ. ಶಶಿಕಿರಣ್ ಶೆಟ್ಟಿ

ಅಲ್ಲೊಂದು ಅವಾರ್ಡ್ ಪ್ರದಾನ ಸಮಾರಂಭ ಆಯೋಜಿಸಿದ್ದರು.. ಆತ ಪ್ರತಿಭಾವoತ, ಹಾಗು ಬುದ್ದಿವಂತ ವಿಡಿಯೋಗ್ರಾಪರ್ ಆಗಿದ್ದ, ಆತ ತೆಗೆದ 10 ನಿಮಿಷಗಳ ಆ ವಿಡಿಯೋ ವಿಶ್ವಾದಾದ್ಯoತ ಜನ ಮೆಚ್ಚುಗೆ ಗಳಿಸಿತ್ತು.. ಆ ವಿಡಿಯೋದಲ್ಲಿ.. ನಾಯಿಯೊಂದು ತಾಯಿ ಮಂಗನ ಕುತ್ತಿಗೆ ಕಚ್ಚಿ ಕೊಂಡೋಯ್ಯುತಿತ್ತು. ಮರಿ ಮಂಗ ಗಟ್ಟಿಯಾಗಿ ತಾಯಿಯನ್ನು ತಬ್ಬಿ ಹಿಡಿದಿತ್ತು ತಾಯಿಯ ಬಾಯಿ, ಕುತ್ತಿಗೆ ಇಂದ ರಕ್ತ ಸೋರುತ್ತಿದ್ದರೂ ಇದಾವುದನ್ನೂ ಲೆಕ್ಕಿಸದೆ ಗಟ್ಟಿಯಾಗಿ ಮರಿಯನ್ನು ತನ್ನ ಕೈ ಇಂದ ಅಪ್ಪಿ ಹಿಡಿದಿತ್ತು..
 ಮುಂದೆ ನಾಯಿ ತಾಯಿ ಮಂಗವನ್ನು ಹರಿದು ತಿಂದು ಮರಿ ಮಂಗನನ್ನು ತಿನ್ನದೇ ಅಲ್ಲೇ ಬಿಟ್ಟು ಹೋಗಿತ್ತು..ನೋಡುಗರನ್ನು ಹಿಡಿದಿಡುತಿತ್ತು ಆ 10 ನಿಮಿಷ. ಈ ವಿಡಿಯೋ ನೋಡುಗರ ಮೈ ನವೀರೇಳಿಸುತಿತ್ತು…. ಅಲ್ಲಿ ಆ ಪ್ರತಿಭಾವಂತ ವಿಡಿಯೋ ಗ್ರಾಪರ್ ನ ಹೆಸರು ಕೂಗುತ್ತಿದ್ದಂತೆ ಜನರ ಚಪ್ಪಾಳೆ ಸದ್ದು ಮುಗಿಲು ಮುಟ್ಟಿತ್ತು …
ಅಲ್ಲಿ ಪ್ರಶಸ್ತಿ ಕೊಡಬೇಕಾಗಿದ್ದ ಹೆಂಗಸು ಆತನನ್ನು ಕಾಯುತಿದ್ದಳು. ಆತ ಬಂದ ತಕ್ಷಣ ಪ್ರಶಸ್ತಿ ಕೊಡುವುದು ಬಿಟ್ಟು ಪಟಾರನೆ ಕಾಪಾಳಕ್ಕೆ ಬಾರಿಸಿ ಬಿಟ್ಟಳು.
ಇದುವರೆಗೆ ಚಪ್ಪಾಳೆ ಸದ್ದಿನಿಂದ ತುಂಬಿ ಹೋಗಿದ್ದ ಸಭೆ ಅರೆಕ್ಷಣ ಸ್ಮಶಾನ ಮೌನ ವಾಗಿಬಿಟ್ಟಿತ್ತು. ಆ ಹೆಂಗಸು ಮೈಕ್ ಹಿಡಿದು ಕೇಳಿದಳು… ನೀನು ಅಷ್ಟು ಹೊತ್ತು ಕ್ಯಾಮೆರಾ ಹಿಡಿಯುವ ಬದಲು, ಕಲ್ಲು ಇಲ್ಲ ಬೆತ್ತ ಹಿಡಿದಿದ್ದರೆ ಸಾಕಿತ್ತು ಆ ನಾಯಿಯಿಂದ ತಾಯಿ ಮಂಗನನ್ನು ಬದುಕಿಸ ಬಹುದಿತ್ತು.
ನೀನು ನಿನ್ನ ಸ್ವಾರ್ಥ ಸಾಧನೆಗಾಗಿ ಅದನ್ನು ಮಾಡಲು ಮುಂದಾಗಲೇ ಇಲ್ಲ.. ಪ್ರತಿಭಾವಂತ ಅನ್ನಿಸಿಕೊಳ್ಳುವ ಹುಚ್ಚು ಆಸೆ ಇಂದ ನೀನು ಕೊನೆಗೂ ಹೃದಯವಂತ ನಾಗಲೇ ಇಲ್ಲ… ಚೀ ಎಂದಳು ಆಕೆ.. ಆಕೆಯ ಕಣ್ಣಲ್ಲೂ ನೀರಿತ್ತು… ಈ ಬಾರಿ ಮತ್ತೆ ಸಭೆಯಲ್ಲಿ ಭರ್ಜರಿ ಕರತಾಡನ ವಾಗಿತ್ತು. ಫೋಟೋಗ್ರಾಪರ್ ಗೂ ಆಕೆಯ ಮಾತು ಸತ್ಯ ಏನಿಸಿತ್ತು ಆತನ ಕಣ್ಣಲ್ಲೂ ನೀರು ಜಿನುಗುತಿತ್ತು

ನಮ್ಮಲ್ಲೂ ಅದೆಷ್ಟು ಜನ ಇಲ್ಲ ಇಂತಹ ಹೃದಯಹೀನ ಪ್ರತಿಭಾವಂತರು 

ತನ್ನದು ಅದೇ ಬ್ಲಡ್ ಗ್ರೂಪ್ ಆಗಿದ್ದರೂ ತಾನು ರಕ್ತ ಕೊಡುವುದು ಬಿಟ್ಟು ಅವನಿಗೆ ಬ್ಲಡ್ ಬೇಕು ಎಂದು ತಮ್ಮ ಸ್ಟೇಟಸ್ ಅಲ್ಲಿ ಹಾಕುವವರು, ಸಹಾಯ, ಸೇವೆ ಎಂದು ಹೋದಲ್ಲೆಲ್ಲ ಬೊಬ್ಬೆ ಹೊಡೆದು ತಮ್ಮ ವಾಟ್ಸಪ್, ಇನ್ಸ್ಟಾಗ್ರಾಮ್ ಸ್ಟೇಟಸ್ ಅಲ್ಲಿ ನೂರಾರು ಫೋಟೋ ಇಟ್ಟು ಒಂದು ಪೈಸ ಕೂಡಾ ದಾನ ಮಾಡದ ಜನರು, ಪ್ರತಿಭಾವಂತರಿಗೆ ಸನ್ಮಾನ ಮಾಡುತ್ತೇವೆ ಎಂದು ಲಕ್ಷಗಟ್ಟಲೆ ಹಣ ಸಂಗ್ರಹಿಸಿ ಅದರಲ್ಲೂ ದುಡ್ಡು ಮಾಡುವ ಮಂದಿ ಕನ್ನಡ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸಿ ಎಂದು ಗಂಟೆಗಟ್ಟಲೆ ಮಾತಾಡಿ ತಮ್ಮ ಮಕ್ಕಳನ್ನೇ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿಸುವ ಮಂದಿ,ನಾನು ಅಷ್ಟು ಜನರಿಗೆ ನೆರವಾಗಿದ್ದೇನೆ, ಇಷ್ಟು ಆಸ್ಪತ್ರೆ ಕಟ್ಟಿದ್ದೇನೆ ಎಂದು ಸಹಾಯ ಮಾಡಿ ಎಂದು ಮನೆಬಾಗಿಲಿಗೆ ಬಂದವರನ್ನು ಒಂದು ಪೈಸೆ ಕೊಡದೆ ಅಲ್ಲಿಂದ ಓಡಿಸುವ ಜನ ಪ್ರತಿನಿಧಿ. ಇಂತಹ ಬುದ್ದಿವಂತ, ಪ್ರತಿಭಾವಂತ ಜನ ನಿಜಕ್ಕೂ ಬೇಕಿಲ್ಲ ನಮಗೆ. ನಮಗೆ ಬೇಕಿದೆ .. ಕೇವಲ ಹೃದಯವoತ ಜನರು ಮಾತ್ರ.

ಯಾಕೆಂದರೆ… ನೆನಪಿಡಿ..ಎಲ್ಲಾ ಪ್ರತಿಭಾವಂತರು, ಹೃದಯವಂತರಾಗಿರುವುದಿಲ್ಲ 
 ಡಾ. ಶಶಿಕಿರಣ್ ಶೆಟ್ಟಿ

 
 
 
 
 
 
 
 
 
 
 

Leave a Reply