ಕೋವಿಡ್‌ನಿಂದ ಜನತೆ ಎದುರಿಸಿದ ಕಷ್ಟ ತುಂಬಲು ಸಾಧ್ಯವಿಲ್ಲ: ಕೂರ್ಮರಾವ್ ಎಂ

ಉಡುಪಿ, ಏಪ್ರಿಲ್ 30 (ಕವಾ): ಕೋವಿಡ್ ಸಂದರ್ಭದಲ್ಲಿ ಜನತೆ ಎದುರಿಸಿದ ಕಷ್ಟ ನಷ್ಟಗಳನ್ನು ಭರ್ತಿ ಮಾಡಲು ಯಾರಿಂದಲೂ
ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಎದುರಿಸಿದ ಬಾಧಕಗಳು ಇಂದಿಗೂ ನಮ್ಮ ಕಣ್ಣ ಮುಂದಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್
ಎಂ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾ ಪಂಚಾಯತ್‌ನ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಪಿ.ಎಂ ಕರ‍್ಸ್
ಫಾರ್ ಚಿಲ್ಡçನ್ ಯೋಜನೆ ಅಡಿಯಲ್ಲಿ ಅನುಮೋದನೆಗೊಂಡ ಕೋವಿಡ್-19 ರಿಂದ ಪೋಷಕರಿಬ್ಬರನ್ನೂ ಕಳೆದುಕೊಂಡoತಹ
ಜಿಲ್ಲೆಯ 3 ಮಕ್ಕಳಿಗೆ ಅಂಚೆ ಪಾಸ್ ಪುಸ್ತಕ, ಆಯುಷ್ಮಾನ್ ಕಾರ್ಡ್, ಪ್ರಧಾನ ಮಂತ್ರಿಗಳಿoದ ಮಕ್ಕಳಿಗೆ ಪತ್ರ, ಸ್ನೇಹ ಪತ್ರ ಸೇರಿದಂತೆ
ಸಮಗ್ರ ಕಿಟ್ ವಿತರಿಸಿ ಮಾತನಾಡಿದರು.

ಪೋಷಕರನ್ನು ಕಳೆದುಕೊಂಡ ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಹಾಗೂ ಅವರು ಶೈಕ್ಷಣಿಕ ಮತ್ತು ಆರ್ಥಿಕವಾಗಿ
ಸಬಲರಾಗಲು ಈ ಯೋಜನೆ ಸಹಾಯಕವಾಗಿದೆ ಅವರುಗಳು ಇನ್ನೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ಬದುಕಬೇಕು ಎಂದು
ಹೇಳಿ, ಮುಂದೆ ಮಕ್ಕಳಿಗೆ ಯಾವುದೇ ರೀತಿಯ ಸಹಾಯ ಬೇಕಾದಲ್ಲಿ ತಮ್ಮನ್ನು ನೇರವಾಗಿ ಸಂಪರ್ಕಿಸುವoತೆ ಹೇಳಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ 18 ವರ್ಷದ ಒಳಗಿನ ಮಕ್ಕಳಿಗೆ ಈ ಯೋಜನೆ ದೊರಕುತ್ತಿದ್ದು, ಫಲಾನುಭವಿಗಳಿಗೆ 23
ವರ್ಷ ಪೂರೈಸುವ ತನಕ ಜಿಲ್ಲಾಧಿಕಾರಿಗಳ ಜೊತೆ ಮಕ್ಕಳು ಜಂಟಿ ಖಾತೆ ಹೊಂದಿರುತ್ತಾರೆ. ಹಾಗೂ ಅಂಚೆ ಠೇವಣಿಯಿಂದ ಬರುವ
ಬಡ್ಡಿ ಹಣವನ್ನು 18 ವರ್ಷ ಪೂರ್ಣಗೊಂಡ ನಂತರ ಮತ್ತು 23 ವಯಸ್ಸಿನ ತನಕ ಪ್ರತಿ ತಿಂಗಳು ಸ್ಟೆöÊಫಂಡ್ ರೀತಿ
ನೀಡಲಾಗುವುದು, ಫಲಾನುಭವಿಗಳು 23 ವರ್ಷಕ್ಕೆ ಬಂದಾಗ ಅವರ ಮುಂದಿನ ಭವಿಷ್ಯದ ಉದ್ದೇಶಕ್ಕಾಗಿ 10 ಲಕ್ಷ ರೂ. ಒಟ್ಟು
ಮೊತ್ತವನ್ನು ಆರ್ಥಿಕ ನೆರವಾಗಿ ನೀಡಲಾಗುವುದು ಹಾಗೂ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುವುದು
ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್,
ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ವೀಣಾ ವಿವೇಕನಂದ ಶಿಶು ಅಭಿವೃದ್ಧಿ ಇಲಾಖೆಯ ನೋಡಲ್ ಅಧಿಕಾರಿ ಕುಮಾರ್ ನಾಯ್ಕ್
ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply