ಬಾಡಿಗೆ ಮನೆಯಲ್ಲಿ ಗೋಣಿಚೀಲದಲ್ಲಿ ಯುವತಿಯ ಮೃತದೇಹ ಪತ್ತೆ

ಸುಳ್ಯ (ನ.22): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ನಗರದ ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹವೊಂದು ಪತ್ತೆಯಾಗಿದ್ದು, ಪತಿಯೇ ಪತ್ನಿಯನ್ನು ಕೊಂದು ಪರಾರಿಯಾಗಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುಳ್ಯದ ರೆಸ್ಟೋರೆಂಟ್ ಒಂದರಲ್ಲಿ ಅಡಿಗೆಯವನಾಗಿ ಆಗಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ   ಮೂಲದ ಇಮ್ರಾನ್ ವಾಸವಿದ್ದ ಬಾಡಿಗೆ ಮನೆಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಆದರೆ, ವಾಸವಿದ್ದ ಅಸಾಮಿ ಇಮ್ರಾನ್‌ ಕಳೆದೆರಡು ದಿನಗಳಿಂದ ನಾಪತ್ತೆಯಾಗಿದ್ದಾನೆ. ಕಳೆದ ಐದಾರು ತಿಂಗಳಿನಿಂದ ಸುಳ್ಯದ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು, ನಗರದ ಹೊರ ವಲಯದ ವಸತಿ ಸಮುಚ್ಛಯದ ಮನೆಯೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದನು. ಕಳೆದ ಎರಡು ತಿಂಗಳ ಹಿಂದೆ ಮದುವೆ ಎಂದು ಊರಿಗೆ ಹೋದವ ತನ್ನ ಪತ್ನಿ ಎಂದು ವಿಕಲ ಚೇತನಳಾದ ಯುವತಿಯೊಂದಿಗೆ ಮರಳಿ ಬಂದಿದ್ದನು.

 
 
 
 
 
 
 

Leave a Reply