ಪ್ರಮಾ ಪ್ರಶಸ್ತಿ -2022 ಪ್ರದಾನ

ಮಣಿಪಾಲ ಡಾ| ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮಣಿಪಾಲ ಡಾಟ್ ಸಂಸ್ಥೆಯ ಸಹಯೋಗದಲ್ಲಿ 8ನೇ ವರ್ಷದ ಪ್ರಮಾಪ್ರಶಸ್ತಿ 2022 ಪ್ರದಾನ ಸಮಾರಂಭ ಮಣಿಪಾಲದಲ್ಲಿ 20-11-2022ರಂದು ನಡೆಯಿತು.

ಬಾಲಪ್ರತಿಭೆಗಳಾದ ಸುಧಾ ಎಸ್. ಆಚಾರ್ಯ (ಸ್ತೋತ್ರ), ದಿಯಾ ಶೆಟ್ಟಿ (ಪಾಕಶಾಸ್ತ್ರ), ಪೂರ್ವಿಕಾ (ನೃತ್ಯ), ಮಾಧವ ಉರಾಳ (ಗಣಿತ), ಪ್ರದ್ಯುಮ್ನ ಪಿ. ರಾವ್ (ವೀಣೆ) ಇವರನ್ನು ಪ್ರಮಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕೆ.ಎಂ.ಸಿ.ಯ ಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಕಿರಣ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಅಭಿರುಚಿಗೆ ತಕ್ಕಂತಹ ವಿಷಯದಲ್ಲಿಯೇ ಪಾಲಕರು ಪ್ರೋತ್ಸಾಹ ನೀಡುವ ಬಗ್ಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕಲಾಶ್ರೀ ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರು ಮಕ್ಕಳಿಗೆ ಕಲೆಯ ಬಗ್ಗೆ ಪ್ರೋತ್ಸಾಹದಾಯಕ ಮಾತನ್ನಡಿದರು. ಟ್ರಸ್ಟ್ನ ಪರವಾಗಿ ವಿದುಷಿ ಪವನ ಬಿ. ಆಚಾರ್ ಪ್ರಸ್ತಾವನೆಗೈದರು. ಪಳ್ಳತ್ತಡ್ಕ ಕೇಶವ ಭಟ್ ಇವರ ಮೊಮ್ಮಗಳಾದ ಪ್ರಮಾಳ ಸಂಸ್ಮರಣೆ ಮಾಡಲಾಯಿತು. ಟ್ರಸ್ಟ್ನ ಶ್ರೀಮತಿ ದೇವಕಿ ಕೆ. ಭಟ್, ಡಾ. ಬಾಲಚಂದ್ರ ಆಚಾರ್, ಡಾ. ಅನಸೂಯ ದೇವಿ ಉಪಸ್ಥಿತರಿದ್ದರು. ಶ್ರೀಮತಿ ಶಿಲ್ಪಾ ಜೋಶಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Leave a Reply