ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಹುಟ್ಟುಹಾಕಲು ಹಲವು ಚಮತ್ಕಾರಗಳನ್ನು ಮಾಡಲಾಗುತ್ತದೆ. ಆದರೆ ಇಲ್ಲೊಂದು ಬಟ್ಟೆ ಕಂಪನಿ ಬಿಕನಿಯಲ್ಲಿ ಹಿಂದೂ ದೇವರ ಫೋಟೋಗಳನ್ನು ಹಾಕಿ ಹಿಂದೂ ಧರ್ಮಿಯರ ತೀವ್ರ ಆಕ್ರೋಶಕ್ಕೊಳಗಾಗಿದೆ.
ಸುಹಾರಾ ರೇ ಸ್ಟಿಮ್ ಎಂಬ ಕಂಪನಿಯೊಂದು ಇಂತಹ ವಿವಾದಕ್ಕೆಡೆಯಾಗಿದೆ. ಸ್ವಿಮ್ ಸೂಟ್ ನಲ್ಲಿ ಹಿಂದೂ ದೇವರ ಫೋಟೋಗಳನ್ನು ಪ್ರಿಂಟ್ ಮಾಡಿದೆ. ಟು ಪೀಸ್ ನಲ್ಲಿ ಹಿಂದೂ ದೇವರ ಫೋಟೋಗಳನ್ನು ಮುದ್ರಿಸಿ ತಮ್ಮ ಹಿಂದೂ ಧರ್ಮಿಯರ ಭಾವನೆಗೆ ಧಕ್ಕೆ ತಂದಿದೆ ಎಂದು ಸುಹಾರಾ ರೇ ಸ್ವಿಮ್ ಕಂಪನಿ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ.
ಮಾಡೆಲ್ ರೊಬ್ಬರು ಹಿಂದೂ ದೇವರ ಫೋಟೋ ಪ್ರಿಂಟ್ ಮಾಡಿರುವ ಬಿಕನಿ ಧರಿಸಿ ಫೋಸ್ ಕೊಟ್ಟಿರುವ ಫೋಟೋವನ್ನು ದಿ ಟ್ರೈಡೆಂಟ್ ಎಂಬ ಹೆಸರಿರುವ ಟ್ವಿಟರ್ ಖಾತೆಯಿಂದ ಶೇರ್ ಮಾಡಸಲಾಗಿದೆ.
ಇಂತಹ ಕುಚೋದ್ಯ ಮಾಡಿರುವುದು ಜೋಕ್ ಅಲ್ಲ. ಈ ಕೂಡಲೇ ಕಂಪನಿ ಇಂತಹ ಬಿಕನಿಯನ್ನು ಮಾರುಕಟ್ಟೆಯಿಂದ ವಾಪಾಸು ಪಡೆಯಬೇಕು. ಅಷ್ಟೆ ಅಲ್ಲದೆ ಬಹಿರಂಗ ಕ್ಷಮೆ ಕೇಳಬೇಕೆಂದು ನೆಟ್ಟಿಗರು ಕಂಪನಿಗೆ ಜಾಡಿಸಿದ್ದಾರೆ.