ಯುವ ಲೇಖಕ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಅಲಂಗಾರು ಇವರಿಗೆ ದಿ. ಜೋಸೆಪ್, ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಪುರಸ್ಕಾರ 

ಉಡುಪಿ: ಕೊಂಕಣಿಯಲ್ಲಿ ಬರೆಯುವ ಯುವ ಸಾಹಿತಿಗಳಿಗೆ, ಕಥೊಲಿಕ್ ಸಭಭಾ-ಉಡುಪಿ ಪ್ರದೇಶ-ಇವರ ಸಹಬಾಗಿತ್ವದಲ್ಲಿ ನೀಡುವ ದಿವಂಗತ ಜೋಸೆಪ್ ಆನಿ ಮೇರಿ ಪಿಂಟೊ ನಿಡ್ಡೋಡಿ ಸ್ಮಾರಕ ಸಾಹಿತ್ಯ ಪುರಸ್ಕಾರ-2022 ಕ್ಕೆ ಯುವ ಲೇಖಕ ಗ್ಲ್ಯಾನಿಶ್ ಜೂಡ್ ಮಾರ್ಟಿಸ್ ಅಲಂಗಾರು ಇವರನ್ನು ಆಯ್ಕೆ ಮಾಡಲಾಗಿದೆ

ಕಳೆದ 7 ವರ್ಷಗಳಿಂದ ಕೊಂಕಣಿ ಪತ್ರಿಕೆಗಳಲ್ಲಿ ಹಾಗೂ ಅಂತರ್ ಜಾಲ ಮಾಧ್ಯಮದಲ್ಲಿ ಇವರ ಕಥೆಗಳು, ಕವನಗಳು ಲೇಖನಗಳು ಪ್ರಕಟಗೊಂಡಿವೆ. ಹಲವಾರು ಕಥೆ, ಕವನ ಹಾಗೂ ಲೇಖನ -ಸ್ಪರ್ದೆಗಳಲ್ಲಿ ಇವರು ಬಹುಮಾನ ಪಡೆದಿದ್ದಾರೆ. 

2021ರಲ್ಲಿ ಬಿ.ಎಸ್ಸಿ ( ಬಯೋಟೆಕ್ನೋಜಿಯಲ್ಲಿ) ಮಂಗಳೂರು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕವನ್ನು ಗಳಿಸಿ, ಪ್ರಸ್ತುತ, ಮೂಡಬಿದ್ರಿ ಅಳ್ವಾಸ್ ಕಾಲೇಜಿನಲ್ಲಿಎಂ.ಎಸ್ಸಿ ( ಬಯೋಟೆಕ್ನೋಜಿಯಲ್ಲಿ) ಶಿಕ್ಷಣವನ್ನು ಪಡೆಯುತಿದ್ದಾರೆ. ಪುರಸ್ಕಾರವನ್ನು ಡಿಸೆಂಬರ್ 4 ರಂದು ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಕಥೊಲಿಕ್ ಸಭಾ, ಕೊಂಕಣಿ ಲೇಖಕರ ಸಂಘ-ಕರ್ನಾಟಕ ಇವರು ಆಯೋಜಿಸಿದ, ಲೇಖಕರ ಸಮಾವೇಶದಲ್ಲಿ ನೀಡಲಾಗುವುದು ಎಂದು ಪುರಸ್ಕಾರ ಸಮಿತಿಯ ಸಂಯೋಜಕರಾದ ಡಾ. ಜೆರಾಲ್ಡ್ ಪಿಂಟೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply