ಕ್ರೀಡಾ ವಿಭಾಗದಲ್ಲಿ ಸುಮಂತ್ ರಾಜ್ಯ ಮಟ್ಟಕ್ಕೆ ಆಯ್ಕೆ

ಕಾರ್ಕಳದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಕ್ರೀಡಾಕೂಟದ 200 ಮೀಟರ್ ಓಟದ 17 ರ ವಯೋಮಾನದ ಒಳಗಿನ ವಿಭಾಗದಲ್ಲಿ ಸುಮಂತ್ 10ನೇ ತರಗತಿ ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ ಈ ವಿದ್ಯಾರ್ಥಿಯು ಅತೀ ಕಡಿಮೆ ಸಮಯದಲ್ಲಿ ಓಟವನ್ನು ಕ್ರಮಿಸಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಇವನ ಕ್ರೀಡಾ ಸಾಧನೆಯನ್ನು ಸಂಸ್ಥೆಯ ಮುಖ್ಯ ಶಿಕ್ಷಕರಾದ ಗಾಯತ್ರಿದೇವಿ ಇವರು ಅಭಿನಂದಿಸಿದರು. ಕ್ರೀಡಾ ಸಾಧಕ ವಿದ್ಯಾರ್ಥಿಗೆ ಸುಧಾಕರ್ ದೈಹಿಕ ಶಿಕ್ಷಣ ಶಿಕ್ಷಕರು ತರಬೇತಿ ನೀಡಿದರು. ಶಾಲಾ ಶಿಕ್ಷಕರು, ಎಸ್.ಡಿ.ಎಂ.ಸಿ. ಸಮಿತಿ ಅಧ್ಯಕ್ಷರು ಸದಸ್ಯರು, ಹಳೆ ವಿದ್ಯಾರ್ಥಿಗಳು ಕ್ರೀಡಾ ಸಾಧಕ ವಿದ್ಯಾರ್ಥಿಯನ್ನು ಅಭಿನಂದಿಸಿ ಗೌರವಿಸಿದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply