Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಹಿರಿಯ ಪತ್ರಕರ್ತ ಅಮೆ೦ಬಳ ಆನಂದ್ ಅವರಿಗೆ ಗೌರವಾರ್ಪಣೆ

ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಉಡುಪಿ ತಾಲೂಕು ಘಟಕದ ವತಿಯಿಂದ ‘ಹಿರಿಯರೆಡೆಗೆ ನಮ್ಮ ನಡಿಗೆ ‘ ಎಂಬ ಕಾರ್ಯಕ್ರಮದಲ್ಲಿ ಇಂದು ಇಂದ್ರಾಳಿಯ ನಿವಾಸದಲ್ಲಿರುವ ಹಿರಿಯ ಪತ್ರಕರ್ತರಾದ ಅಮ್ಮೆಂಬಳ ಆನಂದ ಇವರನ್ನು ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಆಡಿಗರು ಗೌರವಿಸಿ ಅಭಿನಂದಿಸಿ ಮಾತನಾಡುತ್ತ

“ಹಿರಿಯ ಸಮಾಜವಾದಿ ಚಿಂತಕರಾದ ಅಮ್ಮೆಂಬಳ ಆನಂದ್ ಅವರು ಕಮಲಾದೇವಿ ಚಟ್ಟೋ ಪಾಧ್ಯಾಯ , ಅಮ್ಮೆಂಬಳ ಬಾಳಪ್ಪ , ದಿನಕರ ದೇಸಾಯಿ , ಜಾರ್ಜ್ ಫರ್ನಾಂಡಿಸ್ ಅವರ ನಿಕಟ ಸಂಪರ್ಕ ಹೊಂದಿದ್ದವರು.

ಕನ್ನಡ ಸಾರಸ್ವತ ಲೋಕಕ್ಕೆ ಅವರ ಕೊಡುಗೆ ಅನನ್ಯ .ಇಂತಹ ಹಿರಿಯ ಚಿಂತಕರನ್ನು ಗೌರವಿಸುವುದು ನಮ್ಮೆಲ್ಲರ ಭಾಗ್ಯ ” ಎಂದರು.

ಈ ಸಂದರ್ಭದಲ್ಲಿ ಉಡುಪಿ ತಾಲೂಕು ಕಸಾಪ ಅಧ್ಯಕ್ಷ ರವಿರಾಜ್ ಎಚ್ .ಪಿ, ಗೌರವ ಕಾರ್ಯ ದರ್ಶಿ ಜನಾರ್ದನ ಕೊಡವೂರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ ಶೆಣೆೈ, ಕೋಶಾಧ್ಯಕ್ಷ ರಾಜೇಶ್ ಭಟ್ ಪಣಿಯಾಡಿ, ಜಿಲ್ಲಾ ಘಟಕದ ಪದಾಧಿಕಾರಿಗಳಾದ ನಾರಾಯಣ ಮಡಿ, ಭುವನ ಪ್ರಸಾದ್ ಹೆಗ್ಡೆ, ನರಸಿಂಹಮೂರ್ತಿ ರಾವ್, ಸತೀಶ್ ಕೊಡವೂರು ಮೊದಲಾದವರು ಉಪಸ್ಥಿತ ರಿದ್ದರು.

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!