ಕಲ್ಸಂಕ ಜಂಕ್ಷನ್ ಬಳಿ ನಿರ್ಮಿಸಿರುವ ಫ್ರೀ ಲೆಫ್ಟ್   ಉದ್ಘಾಟನೆ

ಮಾಂಡವಿ ಬಿಲ್ಡರ್ಸ್ ಸಹಕಾರದೊಂದಿಗೆ ಕಲ್ಸಂಕ ಜಂಕ್ಷನ್ ಬಳಿ ಫ್ರೀ ಲೆಫ್ಟ್ ನಿರ್ಮಿಸಲಾಗಿದ್ದು, ಇಂದು ದಿನಾಂಕ 23-11-2022 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಉದ್ಘಾಟಿಸಿ ಇದರ ನಿರ್ಮಾಣಕ್ಕೆ ಸಹಕರಿಸಿದ ಮಾಂಡವಿ ಬಿಲ್ಡರ್ಸ್ ನವರಿಗೆ ಅಭಿನಂದನೆ ಸಲ್ಲಿಸಿದರು.

ಫ್ರೀ ಲೆಫ್ಟ್ ನಿರ್ಮಾಣದಿಂದ ವಾಹನ ದಟ್ಟಣೆ ಕಡಿಮೆಯಾಗಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

ಈ ಸಂದರ್ಭದಲ್ಲಿ ಮಾಂಡವಿ ಬಿಲ್ಡರ್ಸ್ ನ ಜೆರ್ರಿ ದಯಾಸ್, ಗ್ಲೆನ್ ಡಯಾಸ್, ಜೆಸನ್ ಡಯಾಸ್, ಉಡುಪಿ ನಗರ ಸಭೆಯ ಸದಸ್ಯರಾದ ಗೀತಾ ಶೇಟ್, ಗಿರೀಶ್ ಅಂಚನ್, ಗಿರಿಧರ್ ಆಚಾರ್ಯ ಕರಂಬಳ್ಳಿ, ಅಶೋಕ್ ನಾಯ್ಕ್, ರಜನಿ ಹೆಬ್ಬಾರ್, ಮಂಜುನಾಥ್ ಮಣಿಪಾಲ್, ಸಂತೋಷ್ ಜತ್ತನ್, ನಾಮ ನಿರ್ದೇಶಿತ ಸದಸ್ಯರಾದ ಅರುಣಾ ಪೂಜಾರಿ, ಉಡುಪಿ ನಗರ ಸಭೆಯ ಪೌರಾಯುಕ್ತರಾದ ಉದಯ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯಶ್ವಂತ್ ಪ್ರಭು, ಉಡುಪಿ ಸಂಚಾರಿ ಪೊಲೀಸ್ ಉಪ ನಿರೀಕ್ಷಕರಾದ ಶಕ್ತಿವೇಲು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply