ಮಣಿಪಾಲ: ಮಾದಕ ವಸ್ತುಗಳ ಮಾರಾಟಕ್ಕೆ ಯತ್ನ।ಬಂಧನ

ಮಣಿಪಾಲ: ಮಾದಕ ವಸ್ತುಗಳನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಬಂಧಿಸಿ 41 ಗ್ರಾಂ ಗಾಂಜಾ, 1.3 MDMA ಮಾತ್ರೆಗಳನ್ನು, ಆರೋಪಿ ವಶದಲ್ಲಿದ್ದ 2 ಮೊಬೈಲ್ ಮತ್ತು ಸ್ಕೂಟರ್ ವಶಪಡಿಸಿ ಕೊಂಡಿದ್ದಾರೆ.  ಬಂಧಿತ ಆರೋಪಿಯನ್ನು ಸರಳೆಬೆಟ್ಟು ನಿವಾಸಿ ಇಕ್ಬಾಲ್ ಎಂದು ಗುರುತಿಸಲಾಗಿದೆ.

ಡಿಸೆಂಬರ್ 27ರಂದು ರಂದು ಖಚಿತ ಮಾಹಿತಿ ಮೇಲೆ ಮಣಿಪಾಲದ ಆರ್.ಎಸ್.ಬಿ ಭವನದ ಬಳಿ ದಾಳಿ ಮಾಡಿ 41 ಗ್ರಾಂ ಗಾಂಜಾ, 1.3 MDMA ಮಾತ್ರೆಗಳನ್ನು, ಆರೋಪಿ ವಶದಲ್ಲಿದ್ದ 2 ಮೊಬೈಲ್ ಮತ್ತು ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನಿಷೇದಿತ ಮಾದಕ ವಸ್ತು ಮತ್ತು ಸ್ಟೂಟರ್ ನ ಒಟ್ಟು ಅಂದಾಜು ಮೌಲ್ಯ ರೂ 38,810/- ಆಗಿರುತ್ತದೆ.

ಬಂಧಿತ ಆರೋಪಿಯನ್ನು ವಿಚಾರಣೆ ನಡೆಸಿ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲು ಬಾಕಿ ಇರುತ್ತದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ್ ಮಚ್ಚಿ೦ದ್ರ ಹಾಕೆ ಐ.ಪಿ.ಎಸ್‌ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಿದ್ದಲಿಂಗಪ್ಪ ಟಿ ಕೆ ಎಸ್ ಪಿ ಎಸ್ ರವರು ತಮ್ಮ ತಂಡದ ಸದಸ್ಯರಾದ ದಿನಕರ ಕೆ.ಪಿ ಡಿ.ವೈ.ಎಸ್ಪಿ ಉಡುಪಿ , ದೇವರಾಜ ಟಿ.ವಿ ಪೊಲೀಸ್‌ ನಿರೀಕ್ಷಕರು ಮಣಿಪಾಲ ಠಾಣೆ, ಅಬ್ದುಲ್ ಖಾದರ್ ಪಿ.ಎಸ್.ಐ ಮಣಿಪಾಲ ಠಾಣೆ , ನಿಧಿ ಪ್ರೊ.ಪಿ.ಎಸ್.ಐ ಮಣಿಪಾಲ ಠಾಣೆ.

ಉಡುಪಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ಶಂಕರ್‌ ನಾಯ್ಕ್‌, ಗ್ರಾಮ ಲೆಕ್ಕಾಧಿಕಾರಿಯಾದ ಪ್ರಮೊದ ಕುಮಾರ ಮತ್ತು ಗುರು ಪ್ರಸಾದ, ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ ಶೈಲೇಶ್ ಕುಮಾರ, ಹೆಚ್ ಸಿ ಇಮ್ರಾನ್, ಸಂತೋಷ್, ಸುರೇಶ ಕುಮಾರ್‌ ,ಪಿಸಿ ಅರುಣ್ ಕುಮಾರ್ , ಆನಂದಯ್ಯ, ಚನ್ನೇಶ್, ಮಂಜುನಾಥ, ಸುದೀಪ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

 

 

 
 
 
 
 
 
 
 
 
 
 

Leave a Reply