ಕಾಂಗ್ರೆಸ್ ಕಾರ್ಯಕರ್ತನಿಗೆ ಹಲ್ಲೆ ಪ್ರಕರಣ: ಕಾರ್ಕಳ ನಗರ ಠಾಣಾ ಎಸೈ ಮಧು ವಿರುದ್ಧ ಎಫ್’ಐಆರ್

ಉಡುಪಿ: ಫೇಸ್ ಬುಕ್ ನಲ್ಲಿ ಸೈನಿಕರ ವಿರುದ್ಧ ಅವಹೇಳನಕಾರಿಯಾದ ಪೋಸ್ಟ್ ಹಾಕಿರುವ ಆರೋಪದ ಮೇಲೆ ಕಾರ್ಕಳದ ಕಾಂಗ್ರೆಸ್ ಕಾರ್ಯಕರ್ತ ರಾಧಾಕೃಷ್ಣ ಅವರ ಮೇಲಿನ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಕಾರ್ಕಳ ನಗರ ಠಾಣಾ ಎಸೈ ಮಧು ಬಿ.ಇ ಅವರ ವಿರುದ್ಧ ಹಲ್ಲೆ ನಡೆಸಿದ ಆರೋಪದ ಮೇಲೆ ಕಾರ್ಕಳ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಕುಂದಾಪುರ ಡಿಎಸ್ಪಿ ಶ್ರೀಕಾಂತ್ ನಾಯಕ್ ಸೋಮವಾರ ಠಾಣೆಗೆ ಭೇಟಿ ನೀಡಿ
ತನಿಖೆ ನಡೆಸುವ ಸಾಧ್ಯತೆ ಇದೆ.

ವರುಷಗಳ ಹಿಂದೆ ನಡೆದ ವಿವಾದಾತ್ಮಕ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಧಾಕೃಷ್ಣ ಅವರು ವಿಚಾರಣೆಗೆ ಹಾಜರಾದ ವೇಳೆ ಅವರ ಮೇಲೆ ನಗರ ಠಾಣೆಯ ಎಸೈ ಮಧು ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. 

ಹಲ್ಲೆಗೊಳಗಾದ ರಾಧಾಕೃಷ್ಣ ಹಾಗೂ ನಗರ ಠಾಣೆಯ ಎಸೈ ಮಧು ಬಿ ಇ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದು, ಪ್ರಕರಣದ ಕುರಿತಾಗಿ ನಾಳೆ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎಸೈ ಮಧು ಹಲ್ಲೆಯಿಂದ ಗಾಯಗೊಂಡಿದ್ದ ರಾಧಾಕೃಷ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ನಾಳೆ ತನಿಖೆಗೆ ತನಿಖಾಧಿಕಾರಿ ಎದುರು ಹಾಜರಾಗುವರು

ಎಂಬ ಮಾಹಿತಿ ಇದೆ. 
ಈ ಹಲ್ಲೆ ವಿಷಯದಲ್ಲಿ ಹಲವಾರು ರಾಜಕೀಯ ಮುಖಂಡರು ಪರಸ್ಪರ ಕೆಸರಾಟ ನಡೆಸಿದ್ದನ್ನು ಈಗಾಗಲೇ ಗಮನಿಸಿರಬಹುದು. ಕೊನೆಯಲ್ಲಿ ದೇಶದ್ರೋಹದ ಹೇಳಿಕೆ ಸರಿಯೋ ಅಥವಾ ವಿಚಾರಣೆ ನಡೆಸಿದ್ದು ಸರಿಯೋ ಎಂದು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾದು ನೋಡಬೇಕು.     
 
 
 
 
 
 
 
 
 
 
 

Leave a Reply