ಬಂಧನದಲ್ಲಿ ಇರುವಾಗಲೇ ಭ್ರಷ್ಟ ತಹಸೀಲ್ದಾರ್ ಅಜಿತ್ ರೈ ವರ್ಗಾವಣೆ!

ಸರ್ಕಾರಿ ಸೇವೆ ಸಲ್ಲಿಸುವ ಅಧಿಕಾರಿ ಅಥವಾ ಯಾವುದೇ ನೌಕರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ, ಎರಡಕ್ಕಿಂತ ಹೆಚ್ಚು ದಿನ ಬಂಧಿಸಿಟ್ಟಲ್ಲಿ ಆತನನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಬಹುದು. ‌ಆದರೆ, ಲೋಕಾಯುಕ್ತಕ್ಕೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗಿರುವ ಭ್ರಷ್ಟ ತಹಸೀಲ್ದಾರ್ ಅಜಿತ್ ರೈಯನ್ನು ಬಂಧನದಲ್ಲಿ ಇರುವಾಗಲೇ ರಾಜ್ಯ ಸರ್ಕಾರ ಬೇರೆ ಕಡೆಗೆ ವರ್ಗಾವಣೆ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ‌

ಅಜಿತ್ ಕುಮಾರ್ ರೈ ಅವರನ್ನು ಬೆಂಗಳೂರು ಕೆಆರ್‌ ಪುರಂನಿಂದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಿದ್ದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದರಿಂದ ಕಂದಾಯ ಇಲಾಖೆ ಅಜಿತ್ ರೈ ವಿರುದ್ಧ ಅಮಾನತು ಆದೇಶ ಹೊರಡಿಸಿತ್ತು. ಅಜಿತ್ ರೈ ಅಧಿಕಾರದಲ್ಲಿದ್ರೆ ಸಾಕ್ಷ್ಯನಾಶ, ಅಧಿಕಾರ ದುರ್ಬಳಕೆ, ತನಿಖೆಗೆ ಅಡ್ಡಿಯಾಗಬಹುದು ಎಂದು ಅಮಾನತಿನಲ್ಲಿಟ್ಟಿತ್ತು. ಅದ್ರೆ ಇದೀಗ ಅದೇ ಭ್ರಷ್ಟ ಅಧಿಕಾರಿ ಅಜಿತ್ ರೈಯನ್ನು ಬಂಧನದಿಂದ ಮುಕ್ತಗೊಳ್ಳುವ ಮೊದಲೇ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿಗೆ ವರ್ಗಾವಣೆ ಮಾಡಲಾಗಿದೆ. 

ಬೆಂಗಳೂರಿನ ತಹಸೀಲ್ದಾರ್ (ಗ್ರೇಡ್ 1) ಆಗಿದ್ದ ಅಜಿತ್ ರೈ ಬಳಿ ಅಪಾರ ಪ್ರಮಾಣದ ಬೇನಾಮಿ ಆಸ್ತಿ ಮತ್ತು ಅಕ್ರಮ ಹಣ ಪತ್ತೆಯಾಗಿತ್ತು. ಇದೀಗ ಗ್ರೇಡ್ -1 ಹುದ್ದೆಯಿಂದ ಗ್ರೇಡ್ – 2 ತಹಸೀಲ್ದಾರ್ ಆಗಿ ಹಿಂಬಡ್ತಿಗೊಳಿಸಿ ಸರ್ಕಾರ ವರ್ಗಾವಣೆ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿ ಸಾಕ್ಷ್ಯ ಸಮೇತ ಸಿಕ್ಕಿಬಿದ್ದಿದ್ರೂ ಸರ್ಕಾರ ಮಾತ್ರ ಅಮಾನತುಗೊಂಡ ತಹಸೀಲ್ದಾರರನ್ನ ತರಾತುರಿಯಲ್ಲಿ ರಾಯಚೂರಿಗೆ ವರ್ಗಾಯಿಸಿ ತನಿಖೆಗೆ ಅಡ್ಡಿ ಮಾಡದಂತಾಗಿದೆ.

 
 
 
 
 
 
 
 
 
 
 

Leave a Reply