ಮಂಗಳೂರಿನ ಪಂಪ್‌ವೆಲ್‌ ಫ್ಲೈಓವರ್‌ ಅಂಡರ್‌ಪಾಸ್‌ ತೀವ್ರ ಮಳೆಯಿಂದ ಜಲಾವೃತ

ಮಂಗಳೂರು ನಗರದಲ್ಲಿ ಭಾರೀ ಮಳೆಯಾಗಿದ್ದು ರಸ್ತೆಗಳಲ್ಲಿ ಮಳೆ ನೀರು ಶೇಖರಗೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಪಂಪ್ವೆಲ್ ಮೇಲ್ಸೇತುವೆ ಅಡಿಭಾಗದಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. 

ಪಂಪ್ವೆಲ್ ಮೇಲ್ಸೇತುವೆಯಲ್ಲಿ ಪ್ರತಿ ಬಾರಿ ಮಳೆಗಾಲದಲ್ಲಿ ತೊ‌ಂದರೆ ಎದುರಾಗುತ್ತದೆ. ಮಂಗಳೂರು ನಗರಕ್ಕೆ ಎಂಟ್ರಿ ಕೊಡುವ ಜಾಗದಲ್ಲೇ ನಾಲ್ಕು ಕಡೆಯಿಂದ ಸೇರುವ ಮಳೆನೀರು ಕಾಲುವೆಯಲ್ಲಿ ಹರಿಯಲು ಸಾಧ್ಯವಾಗದೆ ರಸ್ತೆಗೆ ಬಂದು ನಿಂತಿದೆ. ಸೇತುವೆ ಅಡಿಭಾಗದಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು ವಾಹನಗಳು ಅತ್ತಿತ್ತ ಸಾಗಲು ಸಾಧ್ಯವಾಗದೆ ಸಿಕ್ಕಿಬಿದ್ದಿವೆ. 

ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಜಡಿಮಳೆ ಆಗಿದ್ದು ನಗರದ ಎಲ್ಲ ಕಡೆ ರಸ್ತೆಯಲ್ಲಿ ಪೂರ್ತಿ ನೀರು ತುಂಬಿಕೊಂಡಿದೆ. ಸಂಜೆಯ ವೇಳೆಗೆ, ಮಳೆನೀರು ಪಂಪ್ವೆಲ್ ಸೇತುವೆಯ ಅಡಿಭಾಗವನ್ನು ಆವರಿಸಿದ್ದು ವಾಹನಗಳು ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿವೆ. ಕೆಲವು ವಾಹನಗಳು ನೀರಿನಲ್ಲಿ ಸಾಗಲೆತ್ನಿಸಿ ಸಿಕ್ಕಿಬಿದ್ದಿವೆ. ಮಂಗಳೂರು ನಗರ ಭಾಗದಿಂದ ತಲಪಾಡಿ, ತೊಕ್ಕೊಟ್ಟು, ಬಿಸಿ ರೋಡ್ ಸಾಗುವ ಬಸ್, ಇನ್ನಿತರ ವಾಹನಗಳು ಸಿಕ್ಕಿಬಿದ್ದು ನೀರು ಇಳಿಯದೆ ಅಲ್ಲಿಂದ ಸಾಗುವಂತಿಲ್ಲ ಎನ್ನುವ ಸ್ಥಿತಿಗೆ ಒಳಗಾಗಿದೆ. ಸಾರ್ವಜನಿಕರು ಮೇಲ್ಸೇತುವೆಯ ಅವೈಜ್ಞಾನಿಕ ಕಾಮಗಾರಿಗೆ ಹಿಡಿಶಾಪ ಹಾಕಿದ್ದಾರೆ.

 
 
 
 
 
 
 
 
 
 
 

Leave a Reply