ಯುಪಿಎಂಸಿ ಎಕ್ಸ್ ಪ್ಲೋರಿಕಾ- 2023 ಉತ್ಸವಕ್ಕೆ ಚಾಲನೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿಗಳು ನಡೆಸಿದ ಎಕ್ಸ್ ಪ್ಲೋರಿಕಾ 2023 ಸಾಂಸ್ಕೃತಿಕ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವಕ್ಕೆ ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯರಾದ ಡಾ.ಮಧುಸೂದನ ಭಟ್ ಇವರು ಜುಲೈ 10ರಂದು ಚಾಲನೆ ನೀಡಿದರು. 
ಕಾರ್ಯಕ್ರಮದಲ್ಲಿ ಮೂರು ವಿಭಾಗದಲ್ಲಿ ಸ್ಪರ್ಧೆಗಳು ಏರ್ಪಟ್ಟಿದ್ದು ಮೈನ್ ಗೇಮ್ ನಲ್ಲಿ ಹಗ್ಗ ಜಗ್ಗಾಟ, ಮಿನಿ ಗೇಮ್ ನಲ್ಲಿ ಬಾರ ಎತ್ತುವ ಸ್ಪರ್ಧೆ, ಸೈಡ್ ಗೇಮ್ ನಲ್ಲಿ ಛಾಯಾಂಕನ ಸಂಗ್ರಹ ಮತ್ತು ಟ್ರೆಸರ್ ಹಂಟ್, ಮ್ಯೂಸಿಕಲ್ ಚೇರ್ ಮೊದಲಾದ ಆಟೋಟ ಸ್ಪರ್ಧೆಗಳು ನಡೆದವು. ಸಾಂಸ್ಕೃತಿಕ ಕಾರ್ಯದಲ್ಲಿ ವಿವಿಧ ನೃತ್ಯ ವೈವಿಧ್ಯ ಹಾಗು ಸಂಗೀತಗಳು ಮೂಡಿಬಂದವು. 
ಕಾಲೇಜಿನ ನಿಕಟಪೂರ್ವ ಪ್ರಾಚಾರ್ಯರಾದ ಡಾ.ಮಧುಸೂದನ ಭಟ್ ಇವರನ್ನು ಅಂತಿಮ ವರ್ಷದ ವಿದ್ಯಾರ್ಥಿಗಳು ಸನ್ಮಾನಿಸಿದರು.
ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷರಾಗಿದ್ದರು, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ಕಾರ್ಯಕ್ರಮದ ಅಧ್ಯಾಪಕ ಸಂಯೋಜಕ ಶ್ರೀ ಹರಿಕೇಶವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಅಂತಿಮ ಬಿ.ಕಾಂ ನ ನಿಧಿ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
 
 
 
 
 
 
 
 
 
 
 

Leave a Reply