ಯು.ಪಿ.ಎಂ.ಸಿ ಕಾಲೇಜಿನಲ್ಲಿ ಉಪೇಂದ್ರ ಪೈಗಳ ಜನ್ಮದಿನಾಚರಣೆ

ಕುಂಜಿಬೆಟ್ಟು : ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಸಂಸ್ಥಾಪಕರಾದ ಉಪೇಂದ್ರ ಅನಂತ ಪೈಗಳ 126 ನೇ ಜನ್ಮದಿನಾಚರಣೆ ನಾ.26ರಂದು ಕಾಲೇಜಿನ ಸಭಾಂಗಣದಲ್ಲಿ ಜರಗಿತು. 

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ರವರು ಉಪೇಂದ್ರ ಪೈಗಳ ಪರಿಚಯವನ್ನು ಮಾಡಿಸುತ್ತಾ ಪುಸ್ತಕದಿಂದ ಪಡೆದ ಜ್ಞಾನಕ್ಕಿಂತ ಅನುಭವದಿಂದ ಪಡೆದ ಜ್ಞಾನಕ್ಕೆ ಮಹತ್ವ ನೀಡಿ ತಮ್ಮ ಆಳವಾದ ಅನುಭವದಿಂದ ಮಣಿಪಾಲವನ್ನು ಸರ್ವಾಂಗೀಣ ಅಭಿವೃದ್ಧಿ ಪಥದಲ್ಲಿ ಸಾಗುವುದಕ್ಕೆ ಶ್ರಮಿಸಿದ ಬಗೆಯನ್ನು ವಿವರಿಸಿದರು. 

ಉಪೇಂದ್ರ ಪೈಗಳ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸಲಾಯಿತು. ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಸಿಬಿ ಪೌಲ್ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply