ಉಡುಪಿ: ಶಾಸಕರ ಕಛೇರಿಯ ಬಳಿ ಜನಾಗ್ರಹ ಆಂದೋಲನ

ಉಡುಪಿ: ಲಾಕ್ ಡೌನ್ ನೆಪದಲ್ಲಿ ಜನರ ಹಸಿವಿನ ಬಗ್ಗೆ ಗಮನಕೊಡದೇ ಒಳಜಗಳದಲ್ಲಿ ಸರಕಾರ ಕಾಲಹರಣ ಮಾಡುತ್ತಿದೆ.ಯಾತಕ್ಕೂ ಸಾಲದ ಪರಿಹಾರ ಪ್ಯಾಕೇಜ್ ಮೂಲಕ ಜನರನ್ನು ವಂಚಿಸಿದೆ.ಅಂಗಡಿ ಮುಂಗಟ್ಟುಗಳ ಬೀದಿಬದಿ ವ್ಯಾಪಾರಿಗಳ ಕಣ್ಣೀರಿಗೆ ಅವರ ಕಷ್ಟಕ್ಕೆ ಸ್ವಲ್ಪವೂ ಸರಕಾರ ಸ್ಪಂದಿಸುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶಿಸಿ ಶಾಸಕರ ಕಛೇರಿಯ ಬಳಿ ಇಂದು ಜನಾಗ್ರಹ ಆಂದೋಲನ ನಡೆಯಿತು.

ಸರಕಾರದ ಜನವಿರೋಧಿ ನೀತಿ ಮತ್ತು ಕೊರೋನಾ ಸಂಕಷ್ಟ ಕಾಲದಲ್ಲಿ ಪೀಡಿತರಿಗೆ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾದ ಜನಸಾಮಾನ್ಯರನ್ನು ಮರೆತ ಸರಕಾರ ತನ್ನ ಒಳಜಗಳದಲ್ಲಿ ಮಗ್ನವಾಗಿದೆ. ನಮಸ್ಥೆ ಟ್ರಂಪ್ ಕಾರ್ಯಕ್ರಮದ ಮೂಲಕ ಕೊರೋನಾವನ್ನು ಭಾರತಕ್ಕೆ ಆಹ್ವಾನಿಸಿ ಕುಂಭಮೇಳ, ರಾಜಕೀಯ ಸಮಾವೇಷಗಳ ಮೂಲಕ ಭಾರತದಾದ್ಯಂತ ಸೋಂಕನ್ನು ಹರಡಿದ ಮೋದಿ ಸರಕಾರದ ವಿರುದ್ದ ಆಕ್ರೋಶವನ್ನು ಹೊರಹಾಕಿದರು. 

ಈ ಆಂದೋಲನದಲ್ಲಿ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ವೆಲ್ಫೇರ್ ಪಾರ್ಟಿ, SDPI, JDS ಸಾಮಾಜಿಕ ಸಂಘಟನೆಗಳಾದ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ, JIH, ಸಹಬಾಳ್ವೆ, DSS, PFI ಹಾಗು ಇನ್ನು ಅನೇಕ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದರು. 

ಅಮೃತ್ ಶೆಣೈ, ವೆರೋನಿಕಾ ಕರ್ನೇಲಿಯೋ, ಸುಂದರ್ ಮಾಸ್ತರ್, ಯೋಗೀಶ್ ಶೆಟ್ಟಿ, ಅಬ್ದುಲ್ ಅಝೀಝ್ ಉದ್ಯಾವರ ಹಾಗು ಮತ್ತಿತರರು ಸರಕಾರದ ಮತ್ತು ಉಡುಪಿಯ ಶಾಸಕರ ಧೋರಣೆಯನ್ನು ಖಂಡಿಸಿ ಹೆಚ್ಚಿನ ಪರಿಹಾರ ಘೋಶಿಸುವಂತೆ ಸರಕಾರವನ್ನು ಆಗ್ರಹಿಸಿದರು.

 
 
 
 
 
 
 
 
 
 
 

Leave a Reply