ಆಹಾರ ಮತ್ತು ತಂತ್ರಜ್ಞಾನ ವಿಷಯವಾಗಿ ಉಡುಪಿ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ಜಾಗೃತಿ ಕಾರ್ಯಕ್ರಮ

ಉಡುಪಿಯ ಹಿರಿಯ ನಾಗರಿಕರ ಸಂಸ್ಥೆಯಲ್ಲಿ ಆಹಾರ ಮತ್ತು ತಂತ್ರಜ್ಞಾನ ವಿಷಯವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಜರುಗಿತು. ಈ ವಿಷಯದ ಬಗ್ಗೆ ಉಪನ್ಯಾಸ ನೀಡಲು ಮಣಿಪಾಲದ ವೆಲ್ಕಂಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಷನ್, ಮಾಹೆ, ಇದರ ಪ್ರಾಂಶುಪಾಲ ಡಾ. ಚೆಫ್ ಕೆ ತಿರುಜ್ಞಾನಸಂಬಂತಮ್ ಹಾಗು ಆ ಸಂಸ್ಥೆಯ ಡಯೆಟಿಕ್ಸ್ ಮತ್ತು ಅಪ್ಲೈಡ್ ನ್ಯೂಟ್ರಿಷನ್ ವಿಭಾಗ ಮುಖ್ಯಸ್ಥರಾದ ಪಲ್ಲವಿ ಮಹೇಶ್ ಶೆಟ್ಟಿಗಾರ್ ಇವರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

ಡಾ. ಚೆಫ್ ಕೆ ತಿರು ಇವರು ಹಿರಿಯರ ಆರೋಗ್ಯವನ್ನು ಕಾಪಾಡುವಲ್ಲಿ ಪೌಷ್ಠಿಕಾಂಶದ ಮಹತ್ವ ಮತ್ತು ಉತ್ತಮ ಆರೋಗ್ಯಕ್ಕಾಗಿ ಸೇವಿಸಬೇಕಾದ ಆಹಾರದ ಪ್ರಕಾರವನ್ನು ವಿವರಿಸಿದರು. ಪಲ್ಲವಿಯವರು ಸಾಮಾಜಿಕ ತಾಣದಲ್ಲಿ ಪೌಷ್ಠಿಕಾಂಶ ಮತ್ತು ಆರೋಗ್ಯದ ಬಗ್ಗೆ ಹೇಗೆ ತಪ್ಪು ಮಾಹಿತಿ ಹರಿದಾಡುತ್ತಿದೆ, ಅದನ್ನು ಅನುಸರಿಸಿದರೆ ಅದು ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗು ಹೆಚ್ಚುವರಿಯಾಗಿ, ಅಂತಹ ತಪ್ಪು ಮಾಹಿತಿಯನ್ನು ಹೇಗೆ ಗುರುತಿಸಬಹುದು ಎಂದು ವಿವರವಾಗಿ ತಿಳಿಹೇಳಿದರು. ಹಾಗೆಯೇ ವಯಸ್ಸಾದವರ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಗೆ ಕೆಲವು ಪೌಷ್ಟಿಕಾಂಶದ
ಸಲಹೆಗಳನ್ನು ಸಹ ಅವರು ತಿಳಿಯಪಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕಮ್ಯುನಿಟಿ ಹೆಲ್ತ್ ನರ್ಸಿಂಗ್ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ
ಡಾ. ಶಶಿಧರ ವೈ.ಎನ್ ಅವರು ವಯೋವೃದ್ಧರ ಸ್ವ-ಆರೈಕೆಯ ಮಹತ್ವವನ್ನು ವಿವರಿಸಿದರು. ಸಕ್ರಿಯ ವಯಸ್ಸಾದ ಪರಿಕಲ್ಪನೆಗಳು ಮತ್ತು ದೈಹಿಕ,
ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಪ್ರಾಮುಖ್ಯತೆ, ಸ್ವತಂತ್ರವಾಗಿರುವ ಪ್ರಾಮುಖ್ಯತೆ ಮತ್ತು ತಂತ್ರಜ್ಞಾನದ ಪಾತ್ರವನ್ನು ವಿವರಿಸಿದರು.
ಸಂಘದ ಪ್ರಭಾರಿ ಅಧ್ಯಕ್ಷ ಪಿ. ನಾಗರಾಜ್ ರಾವ್ ಸ್ವಾಗತಿಸಿ, ಕಾರ್ಯದರ್ಶಿ ಕೆ. ಮುರಳೀಧರ್ ಅತಿಥಿಗಳನ್ನು ಪರಿಚಯಿಸಿ, ಗೌರವಾಧ್ಯಕ್ಷ ಎಚ್.
ವಿಶ್ವನಾಥ್.ಹೆಗಡೆ ವಂದಿಸಿದರು. ಈ ಕಾರ್ಯಕ್ರಮವನ್ನು ಮಣಿಪಾಲ ವಾಗ್ಶ ಇದರ ಅಧ್ಯಾಪಕರಾದ ರಾಘವೇಂದ್ರ ಜಿ ಇವರು ಹಿರಿಯ ನಾಗರಿಕರ
ಜೀವನದ ಗುಣಮಟ್ಟವನ್ನು ಸುಧಾರಿಸಲು ಜೆರೋಂಟೆಕ್ನಾಲಾಜಿ ಸಬಲೀಕರಣ ಕಾರ್ಯಕ್ರಮದ (GEP) ಭಾಗವಾಗಿ ಸಂಯೋಜಿಸಿದ್ದರು.

 
 
 
 
 
 
 
 
 
 
 

Leave a Reply