ಸಾಣೂರು ಪದವಿ ಪೂರ್ವ ವಿದ್ಯಾಲಯದ ಕಟ್ಟಡದ ಹಿಂಭಾಗದ ಗುಡ್ಡ ಅಗೆತ ಶುರು

ಕಳೆದ ಒಂದು ತಿಂಗಳಿನಿಂದ ಸಾಣೂರು ಪದವಿ ಪೂರ್ವ ವಿದ್ಯಾಲಯದ ನೂತನ ಕಟ್ಟಡದ ಹಿಂಭಾಗದ ಗುಡ್ಡವನ್ನು ಅರ್ಧ ಕಡಿದು ಅಪಾಯಕಾರಿ ಸ್ಥಿತಿಯಲ್ಲಿದ್ದ ಉಳಿದ ಭಾಗದ ಮಣ್ಣನ್ನು ಜೆಸಿಬಿ ಯಂತ್ರಗಳ ಮೂಲಕ ಅಗೆದು ತೆಗೆಯುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸೂಚನೆಯ ಮೇರೆಗೆ ಗುತ್ತಿಗೆದಾರ ಕಂಪನಿ ಬಿಲ್ಡ್ ಕಾನ್ ಕಂಪನಿ ಯವರು ಕೆಲಸವನ್ನು ಆರಂಭಿಸಿದ್ದಾರೆ.

ಕಟ್ಟಡದ ಹಿಂಭಾಗದ ಗುಡ್ಡ ಜರಿದು ಕಟ್ಟಡಕ್ಕೆ ಹಾನಿಯಾದರೆ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮುತ್ತಿಗೆ ಹಾಕುವುದಾಗಿ ಸಾಣೂರು ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಮತ್ತು ಕಾಲೇಜು ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದರು.

ಗ್ರಾಮಸ್ಥರ ಪ್ರತಿರೋಧಕ್ಕೆ ಮಣಿದ ಹೆದ್ದಾರಿ ಇಲಾಖೆ ಇದೀಗ ಶಾಲಾ ಕಟ್ಟಡದ ಹಿಂಭಾಗದ ಗುಡ್ಡದ ಅಗೆತದ ಕಾರ್ಯ ಪ್ರಾರಂಭಿಸಿದೆ.

ಭೂಸ್ವಾಧೀನಾಧಿಕಾರಿ ಕಚೇರಿಯ ಸರ್ವೆಯರ್ ಪ್ರಾಂಶುಪಾಲರನ್ನು ಭೇಟಿಯಾಗಿ ಶಾಲಾ ಜಾಗಕ್ಕೆ ಕೊಡಬೇಕಾದ ಪರಿಹಾರ ಮೊತ್ತವನ್ನು ಶೀಘ್ರ ಕೊಡುವುದಾಗಿ ಭರವಸೆ ನೀಡಿರುತ್ತಾರೆ.

ದಿಲೀಪ್ ಬಿಲ್ಡ್ ಕಾನ್ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ ಪ್ರಾಂಶುಪಾಲರಿಗೆ ದೂರವಾಣಿ ಮೂಲಕ ಸಂಪರ್ಕಿಸಿ, ಹೆದ್ದಾರಿಯಿಂದ ಪದವಿ ಪೂರ್ವ ವಿದ್ಯಾಲಯಕ್ಕೆ ಸಂಪರ್ಕಿಸುವ ರಸ್ತೆಯ ಡಾಮರೀಕರಣ ,ಕಾಂಕ್ರೀಟ್ ಪ್ರವೇಶ ದ್ವಾರ, ಗೇಟ್ ಮತ್ತು ಸುರಕ್ಷತಾ ಗ್ರಿಲ್ ಶೀಘ್ರವಾಗಿ ಅಳವಡಿಸಿ ಕೊಡುವುದಾಗಿ ಭರವಸೆಯನ್ನು ನೀಡಿರುತ್ತಾರೆ.

ಆಟದ ಮೈದಾನದಲ್ಲಿ ಹೊಸದಾಗಿ ಕೊರೆದ ಬೋರ್ವೆಲ್ ಗೆ ವಿದ್ಯುತ್ ಸಂಪರ್ಕ, ಹೊಸ ಪಂಪ್ ಮತ್ತು ಪೈಪ್ ಲೈನ್ ಮುಂದಿನ ವಾರ ಅಳವಡಿಸುವುದಾಗಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply