ಸಂತೆಕಟ್ಟೆ ಓವರ್‌ಪಾಸ್ ವಾರದೊಳಗೆ ಸಂಚಾರಕ್ಕೆ ಮುಕ್ತ

ಉಡುಪಿ: ಕಲ್ಯಾಣಪುರ ಸಂತೆಕಟ್ಟೆಯಲ್ಲಿ ವೆಹಿಕ್ಯೂಲ‌ರ್ ಓವರ್‌ಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು ಒಂದು ಬದಿಯ ರಸ್ತೆ ಡಾಮರು ಕಾಮಗಾರಿ ಅಂತಿಮ ಹಂತದಲ್ಲಿದೆ. ಮುಂದಿನ ವಾರದಲ್ಲಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸ ಲಾಗುವುದು ಎಂದು ಪ್ರಾಧಿಕಾರದ ಮೂಲ ಖಚಿತಪಡಿಸಿದೆ.

ಜನರ ಬಹುಕಾಲದ ಬೇಡಿಕೆಯಂತೆ 27.4 ಕೋ. ರೂ. ವೆಚ್ಚದಲ್ಲಿ 1 ಕಿ. ಮೀ. ಅಂತರದಲ್ಲಿ ಓವರ್ ಪಾಸ್ ನಿರ್ಮಾಣ ವಾಗುತ್ತಿದೆ. 2023ರ ಜನವರಿಯಲ್ಲಿ ಆರಂಭಗೊಂಡಿದ್ದ ಕಾಮಗಾರಿ ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿತ್ತು. ಈ ಮಧ್ಯೆ ಮಳೆ ಹಾಗೂ ಕಲ್ಲು ಬಂಡೆ ಒಡೆಯುವ ಕಾರಣದಿಂದ ಕಾಮಗಾರಿಗೆ ತೊಡಕುಂಟಾಗಿತ್ತು.

ಮಳೆ ಅನಂತರ ವೇಗ ಪಡೆದ ಕಾಮಗಾರಿ ಇದೀಗ ಒಂದು ಬದಿಯಲ್ಲಿ ಪೂಣಗೊಳಿಸಲಾಗಿದೆ. ಓರ್ವಪಾಸ್ ಕಾಮಗಾರಿ ಆರಂಭಗೊಳ್ಳುವ ಮೊದಲು ಸಾಕಷ್ಟು ಡೈವರ್ಶನ್‌ ಗಳನ್ನು ರೂಪಿಸಿ ಪ್ರತ್ಯೇಕ ಮಾರ್ಗದಲ್ಲಿ ಸಂಚರಿಸಲು ಅವಕಾಶ ಮಾಡಿ ಕೊಡಲಾಗಿತ್ತು. ಒಂದು ಬದಿಯಲ್ಲಿ ಮುಖ್ಯ ರಸ್ತೆ ಸಹಿತ ಸರ್ವಿಸ್ ರಸ್ತೆ ಉಬ್ಬು ತಗ್ಗಿನಿಂದ ಕೂಡಿದ್ದು ಸಂಚಾರ ಸಂಕಷ್ಟದಿಂದ ಕೂಡಿತ್ತು.
ನಿತ್ಯ ಬೆಳಗ್ಗೆ, ಸಂಜೆ ಸಂಚಾರ ದಟ್ಟಣೆ, ವಾಹನ ಸವಾರರಿಗೆ ಕಿರಿಕಿರಿ ತಪ್ಪಿದ್ದಿಲ್ಲ. ಪ್ರತ್ಯೇಕವಾಗಿದ್ದ ವಾಹನ ಸಂಚಾರ ವ್ಯವಸ್ಥೆ ಯನ್ನು ಈ ಹೊಸ ರಸ್ತೆಗೆ ಬದಲಾಯಿಸಲಾಗುತ್ತದೆ. ಅನಂತರ ಇನ್ನೊಂದು ಬದಿಯಲ್ಲಿ ಕಾಮಗಾರಿ ಆರಂಭಿಸಲಾಗುವುದು.
ಸದ್ಯಕ್ಕೆ ಸಂಸ್ಥೆ ಪೂರ್ಣಗೊಂಡ ಹೊಸ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇನ್ನೂ ರೂಟ್ ಡೈವರ್ಶನ್ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಈ ಬಗ್ಗೆ ಅನಂತರ ಸ್ಪಷ್ಟ ಮಾಹಿತಿ ಒದಗಿಸಲಾಗುವುದು ಎಂದು ಹೆದ್ದಾರಿ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply