Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಉಡುಪಿ : ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಡಶಾಲೆಯ ಇಂಟರಾಕ್ಟ್ ಕ್ಲಬ್ ಪದಪ್ರಧಾನ ಸಮಾರಂಭ

ಉಡುಪಿ :- ರೋಟರಿ ಕ್ಲಬ್ ಉಡುಪಿ ವತಿಯಿಂದ ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಪದಪ್ರಧಾನ ಸಮಾರಂಭ ಇಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಹೇಮಂತ್ ಯು ಕಾಂತ್ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ತರಬೇತುದಾರ ರಾಘವೇಂದ್ರ ಪ್ರಭು,ಕರ್ವಾಲು ಮಾತನಾಡಿ, ಪರಿಸರ ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ ಪ್ರತಿಯೊಬ್ಬರ ತಮ್ಮ ಕತ೯ವ್ಯವನ್ನು ಅರಿತು ಪರಿಸರಕ್ಕೆ ಪೂರಕವಾದ ಕಾರ್ಯ ಮಾಡಬೇಕು. ನಾವು ಬದಲಾವಣೆ ಆದರೆ ಮಾತ್ರ ದೇಶ ಬದಲಾವಣೆ’ಯಾಗುತ್ತದೆ. ವಿದ್ಯಾರ್ಥಿಗಳು ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನಾದರೂ’ ಬೆಳೆಸಿ ಪೋಷಿಸಬೇಕು ಎಂದರು. ಪರಿಸರ ರಕ್ಷಣಿಯ ಪಾಠ ಮನೆಯಿಂದ ಪ್ರಾರಂಭವಾಗಲಿ ಎಂದರು.

ಪದ ಪ್ರಧಾನ ಅಧಿಕಾರಿ ಜಿಲ್ಲಾ ಇಂಟರಾಕ್ಟ್ ಸಭಾಪತಿ ಜೈವಿಠಲ್ ಮಾತನಾಡಿ, ವ್ಯಕ್ತಿತ್ವ ವಿಕಸನ ಸಮಾಜ ಸೇವೆಯ ಅಭಿರುಚಿ ಇಂಟರಾಕ್ಟ್ ನಿಂದ ವಿದ್ಯಾರ್ಥಿಗಳಿಗೆ ಲಭಿಸುತ್ತದೆ. ಇದರ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.

ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಬಿ, ಕಾಯ೯ದರ್ಶಿ ಜೆ.ಗೋಪಾಲಕೃಷ್ಣ ಪ್ರಭು, ಇಂಟರಾಕ್ಟ ಸಂಯೋಜಕಿ ವನಿತಾ ಉಪಾಧ್ಯಾಯ ಇಂಟರಾಕ್ಟ್ ನೂತನ ಅಧ್ಯಕ್ಷೆ ಚೈತ್ರ ಮುಂತಾದವರಿದ್ದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!