ಅಂಗನವಾಡಿ ಕೇಂದ್ರ ಸಮೂಹದ ಪೋಷಣಾ ಅಭಿಯಾನ – ಪೌಷ್ಠಿಕ ಆಹಾರ ಶಿಬಿರ ಮತ್ತು ಪ್ರಾತ್ಯಕ್ಷಿಕೆ

ಬ್ರಹ್ಮಾವರ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಬ್ರಹ್ಮಾವರ ವತಿಯಿಂದ ಅಂಗನವಾಡಿ ಕೇಂದ್ರ ಸಮೂಹದ ಪೋಷಣಾ ಅಭಿಯಾನ – ಪೌಷ್ಠಿಕ ಆಹಾರ ಶಿಬಿರ ಮತ್ತು ಪ್ರಾತ್ಯಕ್ಷಿಕೆ ಇಂದು ಶ್ರೀವಾಣಿ ಪ್ರೌಡ ಶಾಲೆ ರಜತಾದ್ರಿ ನಡೂರಿನಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಅಂಗನವಾಡಿ ವಿದ್ಯಾರ್ಥಿಗಳ ಪೋಷಕರು, ಸ್ತ್ರೀಶಕ್ತಿ ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿದ ಪೌಷ್ಠಿಕ ಆಹಾರ ಮತ್ತು ಅಂಗನವಾಡಿ ಕೇಂದ್ರದಲ್ಲಿ ಬೆಳೆಸಿದ ತರಕಾರಿಗಳನ್ನು ಪ್ರಾತ್ಯಕ್ಷಿತೆಗೆ ಇರಿಸಲಾಯಿತು. ಹಾಗು ಸಮೂಹದ ವ್ಯಾಪ್ತಿಯ ಹನ್ನೆರಡು ಜನ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಮಾಡಿ ಗೌರವಿಸಲಾಯಿತು ಹಾಗು ಹದಿನೇಳು ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ನ್ನು ನೀಡಲಾಯಿತು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ನಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಶೆಟ್ಟಿ ನಡೂರು ಅವರು ವಹಿಸಿದ್ದರು. ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಅನಿಲ್ ಕುಮಾರ್, ಕಾಡೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಕುಮಾರ್, ನಡೂರು ವಾಣಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಧ ಶೆಟ್ಟಿ , ಬ್ರಹ್ಮಾವರ ಶಿಶು ಅಭಿವ್ರದ್ದಿ ಯೋಜನಾಧಿಕಾರಿ ಕುಮಾರ್ ನಾಯ್ಕ್ ವಿ, ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವ್ರದ್ದಿ ಇಲಾಖೆಯ ಉಪನಿರ್ದೇಶಕರಾದ ಶೇಷಪ್ಪ ಆರ್ ,ಮಂದಾರ್ತಿ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಗಂಗಾಧರ ಶೆಟ್ಟಿ ಹಾಗು ನಿರ್ದೇಶಕ ನಿತ್ಯಾನಂದ ಶೆಟ್ಟಿ ನಡೂರು,ಕಾಡೂರು ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಅಮಿತಾ, ಬಾಲವಿಕಾಸ ಸಮಿತಿಯ ಅಧ್ಯಕ್ಷರು , ಕಾಡೂರು ನಡೂರು ಗ್ರಾಮ ಪಂಚಾಯತ್ ಸದಸ್ಯರು, ಅಂಗನವಾಡಿ ಸಮೂಹದ ಕಾರ್ಯಕರ್ತೆಯರು ಪಂಚಾಯತ್ ವ್ಯಾಪ್ತಿಯ ಆಶಾಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಅಂಗನವಾಡಿ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು, ಮಹೇಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

 
 
 
 
 
 
 
 
 
 
 

Leave a Reply